ನಮ್ಮ ರಾಜಕಾರಣಿಗಳಿಗೆ ಉಗ್ರರ ಜೊತೆ ಲಿಂಕ್‌ ಇದೆ: ಪಾಕ್‌ ವಿದೇಶಾಂಗ್‌ ಇಲಾಖೆ

masthmagaa.com:

ಪಾಕ್‌ಗೂ ಉಗ್ರ ಸಂಘಟನೆಗಳಿಗೂ ಕರಳುಬಳ್ಳಿಯ ಸಂಬಂಧ ಅನ್ನೋದು ಇಡೀ ಜಗತ್ತಿಗೆ ಗೊತ್ತಿರೋ ವಿಚಾರ. ಇದೀಗ ಪಾಕ್‌ನ ಕೆಲ ರಾಜಕಾರಣಗಳಿಗೆ ಉಗ್ರ ಸಂಘಟನೆಗಳ ಜೊತೆ ಲಿಂಕಿದೆ ಅಂತ ಖುದ್ದು ಪಾಕಿಸ್ತಾನ ಒಪ್ಕೊಂಡಿದೆ. ಇತ್ತೀಚೆಗೆ ತಾನೆ ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ರ ಆಪ್ತ ಮಿರ್ಜಾ ಶಹಜಾದ್‌ ಅಕ್ಬರ್‌ ಮೇಲೆ ಅವ್ರ ಬ್ರಿಟನ್‌ ನಿವಾಸದಲ್ಲಿ ಆ್ಯಸಿಡ್‌ ದಾಳಿಯಾಗಿತ್ತು. ಈ ಬಗ್ಗೆ ಕೇಳಿದಾಗ ಪಾಕ್‌ ವಿದೇಶಾಂಗ ಇಲಾಖೆಯ ವಕ್ತಾರೆ, ಮಮ್ತಾಜ್‌ ಜೆಹ್ರಾ ಬಲೋಚ್‌, ಇದ್ರಲ್ಲಿ ಪಾಕ್‌ ಸರ್ಕಾರದ ಇನ್ವಾಲ್ವ್‌ಮೆಂಟ್‌ ಇಲ್ಲ. ಆದ್ರೆ ಬಹಳ ಜನ ಭಿನ್ನಮತ ಹೊಂದಿದ ಪಾಕ್‌ ರಾಜಕಾರಣಿಗಳು ಬ್ರಿಟನ್‌ ಹಾಗು ಬೇರೆ ದೇಶಗಳಲ್ಲಿ ಆಶ್ರಯ ಪಡೀತಿದ್ದಾರೆ. ಇವ್ರಲ್ಲಿ ಬಹಳ ಜನಕ್ಕೆ ಪಾಕ್‌ನಲ್ಲಿರೋ ಉಗ್ರ ಸಂಘಟನೆಗಳ ಜೊತೆಗೆ ನಂಟಿದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply