ಬಾಕಿ ಉಳಿಸಿಕೊಂಡಿದ್ದಕ್ಕೆ ಪಾಕ್‌ ವಿಮಾನ ಮಲೇಷಿಯಾ ಪಾಲು!

masthmagaa.com:

ಪಾಕಿಸ್ತಾನ ತನ್ನ ಆರ್ಥಿಕ ಬಿಕ್ಕಟ್ಟಿನಿಂದ ಅನೇಕ ಬಿಲ್‌ಗಳನ್ನ ಪಾವತಿಸಿಲ್ಲ. ಇದೀಗ ಬಾಕಿ ಉಳಿಸಿಕೊಂಡಿದ್ದ ಹಣ ಪಾವತಿ ಮಾಡಿಲ್ಲ ಅನ್ನೋ ಕಾರಣಕ್ಕೆ ಮಲೇಷಿಯಾ ಸರ್ಕಾರ ಪಾಕಿಸ್ತಾನದ ವಿಮಾನವನ್ನೇ ವಶಕ್ಕೆ ತೆಗೆದುಕೊಂಡಿದೆ. ಪಾಕ್‌ನ ಅಂತಾರಾಷ್ಟ್ರೀಯ ಏರ್‌ಲೈನ್ಸ್‌ ಕಾರ್ಪೊರೇಷನ್ ಸಂಸ್ಥೆಯ ಬೋಯಿಂಗ್ 777 ವಿಮಾನವನ್ನ ಮಲೇಷಿಯಾ ಸರ್ಕಾರ ವಶಕ್ಕೆ ಪಡೆದಿದೆ. ಮೇ 29ರಂದೇ ಸೀಜ್‌ ಮಾಡಲಾಗಿದ್ದು, ಇದೀಗ ವಿಷಯ ಬೆಳಕಿಗೆ ಬಂದಿದೆ. ಮಲೇಷಿಯಾದ ಕೌಲಾ ಲಂಪೂರ್ ವಿಮಾನ ನಿಲ್ದಾಣದಿಂದ ಪಾಕಿಸ್ತಾನ ಏರ್‌ಲೈನ್ಸ್‌ ವಿಮಾನ ಪಾಕಿಸ್ತಾನಕ್ಕೆ ಹೊರಡುವ ವೇಳೆ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಿ ಮಲೇಷಿಯಾ ಸರ್ಕಾರದ ಅಧಿಕಾರಿಗಳು, ವಿಮಾನವನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಮಲೇಷಿಯಾದಿಂದ ಬೋಯಿಂಗ್‌ 777 ವಿಮಾನವನ್ನ ಪಾಕ್‌ ಲೀಜ್‌ಗೆ ತೆಗೆದುಕೊಂಡಿತ್ತು. ಆದ್ರೆ ಲೀಜ್‌ನ್ 4 ಮಿಲಿಯನ್‌ ಡಾಲರ್‌ ಅಂದ್ರೆ ಸುಮಾರು 32.8 ಕೋಟಿ ರೂಪಾಯಿ ಹಣವನ್ನ ಪಾಕ್‌ ಬಾಕಿ ಇಟ್ಕೊಂಡಿದೆ. ಹೀಗಾಗಿ ವಿಮಾನವನ್ನ ವಶಕ್ಕೆ ಪಡೆಯಲು ಮಲೇಷಿಯಾ ಸರ್ಕಾರ ಅಲ್ಲಿನ ಕೋರ್ಟ್‌ ಮೆಟ್ಟಿಲೇರಿತ್ತು. ಇದಕ್ಕೆ ಕೋರ್ಟ್‌ ಅನುಮತಿ ನೀಡಿದ್ದು, ಸರ್ಕಾರ ಕ್ರಮ ಕೈಗೊಂಡಿದೆ. ಅಂದ್ಹಾಗೆ ಈ ಹಿಂದೆಯೂ ಇದೇ ವಿಷಯಕ್ಕೆ ಇದೇ ವಿಮಾನವನ್ನ 2021ರಲ್ಲಿ ಮಲೇಷಿಯಾ ಸರ್ಕಾರ ಸೀಜ್‌ ಮಾಡಿತ್ತು.‌ ಬಳಿಕ ಪಾಕ್‌ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಿದ ಬಳಿಕ ಬಿಡಲಾಗಿತ್ತು.

-masthmagaa.com

Contact Us for Advertisement

Leave a Reply