ಖಾನ್​ ಕುರ್ಚಿ ಕಳೆದುಕೊಳ್ಳೋದ್ರ ಹಿಂದೆ ಅಮೆರಿಕ ಕೈವಾಡ ಇಲ್ಲ: ಪಾಕ್​ ಸೇನೆ

masthmagaa.com:

ನ್ನನ್ನ ಅಧಿಕಾರದಿಂದ ತೆಗೆಯೋದ್ರ ಹಿಂದೆ ವಿದೇಶಿ ಕೈವಾಡ ಇತ್ತು, ಅದನ್ನ ನ್ಯಾಷನಲ್‌ ಸೆಕ್ಯುರಿಟಿ ಕೌನ್ಸಿಲ್‌ನಲ್ಲೂ ಚರ್ಚೆ ಮಾಡಿದ್ವಿ ಅಂತ ಹೇಳಿದ್ದ ಇಮ್ರಾನ್‌ ಖಾನ್‌ ಆರೋಪವನ್ನ ಪಾಕ್‌ ಸೇನೆ ತಳ್ಳಿ ಹಾಕಿದೆ. ಈ ಸಂಬಂಧ ಸುದ್ಧಿಗೋಷ್ಠಿ ನಡೆಸಿ ಮಾತಾಡಿರೋ ಪಾಕ್‌ ಸೇನೆಯ ವಕ್ತಾರ ಮೇಜರ್‌ ಜನರಲ್‌ ಬಾಬರ್‌ ಇಫ್ತಿಖಾರ್‌, ನ್ಯಾಷನಲ್‌ ಸೆಕ್ಯುರಿಟಿ ಕೌನ್ಸಿಲ್‌ ಸಭೆ ಬಗ್ಗೆ ನಾವು ಸಂಪೂರ್ಣ ಹೇಳಿಕೆಯನ್ನ ಪ್ರಕಟ ಮಾಡಿದ್ದೀವಿ. ಅದು ನಿಮ್ಮ ಮುಂದೆಯೇ ಇದೆ, ಅದ್ರಲ್ಲಿ ವಿದೇಶಿ ಪಿತೂರಿ ಅನ್ನೋ ಶಬ್ಧವೇ ಬಳಕೆ ಆಗಿಲ್ಲ ಎಂದಿದ್ದಾರೆ. ಇನ್ನು ಇಮ್ರಾನ್‌ ಖಾನ್‌ಗೆ ಆರ್ಮಿ ಏನಾದ್ರು ಸಲಹೆಗಳನ್ನ ನೀಡಿತ್ತಾ ಅಂತ ಪ್ರಶ್ನೆ ಮಾಡಿದ್ಕೆ, ಪಾಕ್‌ ರಾಜಕಾರಣದಲ್ಲಿ ನಾವು ಯಾವತ್ತೂ ಹಸ್ತಕ್ಷೇಪ ಮಾಡಲ್ಲ, ನಾವು ಯಾವಾಗ್ಲೂ ಪಕ್ಷಾತೀತವಾಗಿ ಇರ್ತೇವೆ. ಹಾಗಾಗಿ ಅವ್ರಿಗೆ ಯಾವುದೇ ಸಲಹೆ ನೀಡಿಲ್ಲ ಅಂತ ಹೇಳಿದ್ದಾರೆ. ಇನ್ನು ಇದೇ ಸಮಯದಲ್ಲಿ ಅಮೆರಿಕ ಯಾವತ್ತೂ ಪಾಕ್‌ನಲ್ಲಿ ಸೇನಾನೆಲೆ ಮಾಡ್ಕೋತೀವಿ ಅಂತ ಕೇಳಿಲ್ಲ ಅಂತಾನೂ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply