ಪಾಕ್​ ನೂತನ ಪ್ರಧಾನಿ ಕೈಯಲ್ಲಿ ಪರಮಾಣು ಶಸ್ತ್ರಾಸ್ತ್ರ ಸೇಫ್​ ಇರಲ್ಲ: ಇಮ್ರಾನ್​ ಖಾನ್

masthmagaa.com:

ಪಾಕ್​ ಪಿಎಂ ಕುರ್ಚಿ ಕಳ್ಕೊಂಡು ಹತಾಶರಾಗಿರೋ ಇಮ್ರಾನ್‌ ಖಾನ್‌, ನೂತನ ಪ್ರಧಾನಿ ಶಹಬಾಜ್‌ ಶರೀಫ್‌ ಕೈ ಕೆಳಗೆ ಪರಮಾಣು ಶಸ್ತ್ರಾಸ್ತ್ರಗಳು ಸೇಫ್‌ ಆಗಿ ಇರಲ್ಲ ಅಂತ ಹೇಳಿದ್ದಾರೆ. ಪೇಷಾವರದ ರೋಡ್‌ ಶೋನಲ್ಲಿ ಮಾತಾಡಿರೋ ಇಮ್ರಾನ್‌, ಕಳ್ಳರು ಮತ್ತು ದರೋಡೆಕೋರರ ಕೈಯಲ್ಲಿ ಪರಮಾಣು ಶಸ್ತ್ರಾಸ್ತ್ರಗಳು ಹೇಗೆ ಸುರಕ್ಷಿತವಾಗಿ ಇರುತ್ವೆ ಅಂತ ಪ್ರಶ್ನೆ ಮಾಡಿದ್ದಾರೆ. ಇನ್ನು ಯುಕ್ರೇನ್‌ ಯುದ್ಧದ ಸಮಯದಲ್ಲೇ ತಾನು ರಷ್ಯಾಗೆ ಹೋಗಿದಕ್ಕೆ ಅಮೆರಿಕ ತನ್ನನ್ನ ಅಧಿಕಾರದಿಂದ ಕೆಳಗಿಳಿಸೋಕೆ ಸಂಚು ಮಾಡಿದೆ ಅಂತ ಮತ್ತೆ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply