ಚೀನಾ ನಮಗೆ ಸಹಾಯ ಮಾಡುತ್ತೆ: ಪಾಕಿಸ್ತಾನ

masthmagaa.com:

ಆರ್ಥಿಕ ಬಿಕ್ಕಟ್ಟು ಹಾಗೂ ರಾಜಕೀಯ ಅಸ್ಥಿರತೆಯನ್ನ ಫೇಸ್‌ ಮಾಡ್ತಿರುವ ಪಾಕಿಸ್ತಾನ ಚೀನಾದೊಂದಿಗೆ ತಮ್ಮ ಸಹಕಾರವನ್ನ ವಿಸ್ತರಿಸಲು ಮಾತುಕತೆ ನಡೆಸುತ್ತಿರೋದಾಗಿ ಹೇಳಿದೆ. ಈ ಬಗ್ಗೆ ಇಂಟರ್‌ವ್ಯೂ ಒಂದ್ರಲ್ಲಿ ಮಾತಾಡಿರುವ ಪಾಕಿಸ್ತಾನ ಹಂಗಾಮಿ ಪ್ರಧಾನಿ ಅನ್ವರ್‌ ಉಲ್‌ ಹಕ್‌ ಕಾಕರ್‌, ನಾವು ಸಾಲದ ಸಮಸ್ಯೆಗಳನ್ನೂ ಮೀರಿ ಹೆಚ್ಚಿನ ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ ಅಂತ ಹೇಳಿದ್ದಾರೆ. ಇದೇ ವೇಳೆ ಯಾವ ರೀತಿ ಕ್ರಮಗಳಿಂದ ನಮ್ಮ ಆರ್ಥಿಕ ಸಮಸ್ಯೆಗಳಿಗೆ ಸಹಕಾರಿಯಾಗಲಿದೆ ಅನ್ನೋ ಕುರಿತು ಚೀನಾ ಪರಿಶೀಲನೆ ನಡೆಸುತ್ತಿದೆ ಅಂತ ಪಾಕ್‌ ಪ್ರಧಾನಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply