ತೋಷಾಖಾನ ಕೇಸ್‌ನಲ್ಲಿ ಪಾಕಿಸ್ತಾನ ಕೋರ್ಟ್‌ ಮಹತ್ವದ ತೀರ್ಪು!

masthmagaa.com:

ಪಾಕಿಸ್ತಾನದಲ್ಲಿ ತೋಷಾಖಾನ ಕೇಸ್‌ನಲ್ಲಿ ಆರೋಪಿಗಳಾಗಿದ್ದ ಎಲ್ಲಾ ನಾಯಕರು, ಸಂಸದರಿಗೆ ಬಿಗ್‌ ರಿಲೀಫ್‌ ಸಿಕ್ಕಿದೆ. ಬರುವ ಎಲೆಕ್ಷನ್‌ನಲ್ಲಿ ಸ್ಪರ್ಧಿಸೋ ನಾಯಕರು ಪಾಕ್‌ ಚುನಾವಣಾ ಆಯೋಗಕ್ಕೆ ತಮ್ಮ ಆಸ್ತಿ ವಿವರ ಸಲ್ಲಿಸಿದ್ರು. ಆದ್ರೆ ಯಾರೊಬ್ರು ತಮಗೆ ಬಂದಿರೋ ತೋಷಾಖಾನಾ ಉಡುಗೊರೆಗಳ ಬಗ್ಗೆ ವಿವರ ನೀಡಿರ್ಲಿಲ್ಲ. ಇದನ್ನ ಪ್ರಶ್ನಿಸಿ ವ್ಯಕ್ತಿಯೊಬ್ರು ಲಾಹೋರ್‌ ಹೈ ಕೋರ್ಟ್‌ ಮೆಟ್ಟಿಲೇರಿದ್ರು. ಅಲ್ಲದೆ ಮಾಜಿ ಪ್ರಧಾನಿಗಳಾದ ನವಾಜ್‌ ಷರೀಫ್‌, ಇಮ್ರಾನ್‌ ಖಾನ್‌ ಸೇರಿದಂತೆ ಹಲವು ನಾಯಕರ ಮೇಲೆ ಕ್ರಿಮಿನಲ್‌ ಕೇಸ್‌ ದಾಖಲಿಸಬೇಕು ಅಂತ ಅರ್ಜಿ ಸಲ್ಲಿಸಿದ್ರು. ಆದ್ರೆ ಈ ಎಲ್ಲಾ ಅರ್ಜಿಗಳನ್ನ ಲಾಹೋರ್‌ ಕೋರ್ಟ್‌ ರಿಜೆಕ್ಟ್‌ ಮಾಡಿದೆ. ಆ ಮೂಲಕ ಈ ಇಬ್ಬರಲ್ಲದೇ ತೋಷಾಖಾನ ಅಕ್ರಮ ಆರೋಪ ಹೊತ್ತಿದ್ದ ನಾಯಕರಿಗೆ ಚುನಾವಣೆಯ ಮಾರ್ಗ ಕ್ಲಿಯರ್‌ ಆಗಿದೆ. ಇವೆಲ್ಲದ್ರ ಮಧ್ಯೆ ಪಾಕಿಸ್ತಾನದಲ್ಲಿ ಮಿಲಿಟರಿ ಆಶಿರ್ವಾದದ ಜೊತೆ ನವಾಜ್‌ ಷರೀಫ್‌ ನಾಲ್ಕನೇ ಬಾರಿಗೆ ಪ್ರಧಾನಿ ಆಗಲಿದ್ದಾರೆ ಅನ್ನೋ ಗುಮಾನಿಗಳು ಕೇಳಿ ಬರ್ತಿವೆ.

-masthmagaa.com

Contact Us for Advertisement

Leave a Reply