ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಮೇಲಿನ ಲಂಚದ ಕೇಸ್‌ ಖುಲಾಸೆಗೊಳಿಸಿದ ಪಾಕ್‌ ಕೋರ್ಟ್‌!

masthmagaa.com:

ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್‌ ಶರೀಫ್‌ ಅವ್ರನ್ನ ಕೇಸ್‌ ಒಂದ್ರಲ್ಲಿ ಅಲ್ಲಿನ ಲಾಹೋರ್‌ ಕೋರ್ಟ್‌ ಖುಲಾಸೆಗೊಳಿಸಿದೆ. ಪಾಕಿಸ್ತಾನ ಮಾಧ್ಯಮ ಸಂಸ್ಥೆ ಮುಖ್ಯಸ್ಥರೊಬ್ರಿಗೆ ಸರ್ಕಾರಿ ಜಮೀನನ್ನ ಲಂಚವಾಗಿ ನೀಡಿದ್ದ ಕೇಸ್‌ಗೆ ಸಂಬಂಧಿಸಿದಂತೆ ನವಾಜ್‌ ಷರೀಫ್‌ರನ್ನ ಲಾಹೋರ್‌ ಕೋರ್ಟ್‌ ಖುಲಾಸೆಗೊಳಿಸಿದೆ. ಪಾಕಿಸ್ತಾನದ ಪ್ರಮುಖ ಸುದ್ಧಿ ಸಂಸ್ಥೆಯಾದ Geo media group ಓನರ್‌ ಮಿರ್‌ ಶಕೀಲ್‌ ಉರ್‌ ರೆಹಮಾನ್‌ ಅವ್ರಿಗೆ 37 ವರ್ಷಗಳ ಹಿಂದೆ 6.75 ಎಕರೆ ಸರ್ಕಾರಿ ಭೂಮಿಯನ್ನ ನವಾಜ್‌ ಅಕ್ರಮವಾಗಿ ವರ್ಗಾವಣೆ ಮಾಡಿದ್ದರು ಅಂತ ಆರೋಪಿಸಿಲಾಗಿತ್ತು. ಈ ಕೇಸ್‌ಗೆ ಸಂಬಂಧಿಸಿದಂತೆ 2017ರಲ್ಲಿ ನವಾಜ್‌ರನ್ನ ಅಲ್ಲಿನ ಸುಪ್ರೀಂಕೋರ್ಟ್‌ ಎಲ್ಲ ಅಧಿಕಾರಗಳಿಂದ ಡಿಸ್‌ಕ್ವಾಲಿಫೈ ಮಾಡಿತ್ತು. ಇದೀಗ ನವಾಜ್‌ರ ಸಹೋದರ ಪ್ರಸ್ತುತ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌ ಅವ್ರು ರಾಜಕೀಯ ವ್ಯಕ್ತಿಗಳ ಮೇಲೆ ಮಾಡಲಾಗುವ ಲೈಫ್‌ಲಾಂಗ್‌ ಬ್ಯಾನ್‌ ಅನ್ನ ತೆಗೆಯೋಕೆ ಹೆಲ್ಪ್‌ ಆಗುವಂತೆ ಕಾನೂನಿಗೆ ತಿದ್ದುಪಡಿ ಮಾಡಿದ್ದಾರೆ. ಈ ತಿದ್ದುಪಡಿ ಆದ ಕೆಲವೇ ದಿನಗಳ ನಂತ್ರ ಕೋರ್ಟ್‌ ನವಾಜ್‌ರನ್ನ ಈ ಕೇಸ್‌ನಿಂದ ಖುಲಾಸೆಗೊಳಿಸಿದೆ. ಅಂದ್ಹಾಗೆ ಪಾಕಿಸ್ತಾನದ ರೂಲಿಂಗ್‌ ಪಾರ್ಟಿ PML-N ಹಿರಿಯ ನಾಯಕರಾಗಿರೋ ನವಾಜ್‌ ಅವ್ರು 2019ರಿಂದ ಬ್ರಿಟನ್‌ನಲ್ಲಿ ವಾಸಿಸುತ್ತಿದ್ದಾರೆ.

-masthmagaa.com

Contact Us for Advertisement

Leave a Reply