ಪಾಕ್​ ಪಿಎಂ ಕುರ್ಚಿ ಕಿತ್ತಾಟ: ಯಾರಾಗ್ತಾರೆ ಮುಂದಿನ ಪ್ರಧಾನಿ

masthmagaa.com:

ಪಾಕ್ ರಾಜಕೀಯದ ಹಾವು ಏಣಿ ಆಟಕ್ಕೆ ಇಂದು ಪುಲ್‌ ಸ್ಟಾಪ್‌ ಬಿಳೋ ಸಾಧ್ಯತೆ ಇದೆ. ಪಿಎಂ ಕುರ್ಚಿಯಿಂದ ಇಮ್ರಾನ್‌ ನಿರ್ಗಮಿಸಿದ ಬೆನ್ನಲ್ಲೇ ಈಗ ಹೊಸ ಪ್ರಧಾನಿಯ ಪಟ್ಟಾಭಿಷೇಕಕ್ಕೆ ತಯಾರಿ ಫುಲ್‌ ಜೋರಾಗಿದೆ. ಇಮ್ರಾನ್‌ ಪದಚ್ಯುತಿಗೆ ಪ್ರಮುಖ ಕಾರಣವಾದ ಅಲ್ಲಿನ ಪ್ರತಿಪಕ್ಷ ನಾಯಕ ಶೆಹ್ಬಾಜ್‌ ಷರೀಫ್ ಪ್ರಧಾನಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಅವರೇ ಪಾಕ್‌ನ ಹೊಸ ಪ್ರಧಾನಿಯಾಗಿ ನೇಮಕಗೊಳ್ಳೋದು ಬಹುತೇಕ ಕನ್ಫರ್ಮ್​​ ಆಗಿದೆ. ಇತ್ತ ಕುರ್ಚಿ ಬಿಟ್ಟುಕೊಟ್ಟ ಇಮ್ರಾನ್‌ ಪಾಳಯ ಕೂಡ ಅಂತಿಮ ಪ್ರಯತ್ನ ಮಾಡ್ತಿದ್ದು, ಪಿಟಿಐ – ಪಾಕಿಸ್ತಾನ್‌ ತೆಹ್ರೀಕ್‌ ಇ ಇನ್ಸಾಫ್‌ ಪಕ್ಷದಿಂದ ಶಾ ಮೊಹ್ಮದ್‌ ಖುರೇಷಿಯನ್ನ ಪ್ರಧಾನಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಇವರು ಇಮ್ರಾನ್​ ಖಾನ್​ ಸರ್ಕಾರದಲ್ಲಿ ಫಾರಿನ್​ ಮಿನಿಸ್ಟರ್​ ಆಗಿದ್ರು. ಅಂದ್ಹಾಗೆ ಪಾಕ್‌ನ ಪ್ರಧಾನಿಯಾಗಬೇಕಾದ್ರೆ, ಸರ್ಕಾರ ರಚನೆಯಾಗಬೇಕಾದ್ರೆ ಅವರಿಗೆ ಕನಿಷ್ಠ 172 ಸಂಸದರ ಬೆಂಬಲ ಬೇಕು. ಆದ್ರೆ ಈಗಾಗಲೇ ಇಮ್ರಾನ್​ ಖಾನ್​ ಪಕ್ಷ ಬಹುಮತ ಕಳೆದುಕೊಂಡಿರೋದ್ರಿಂದ, ಶಹ್ಬಾಜ್‌ ಷರೀಫ್‌ಗೆ ಗೆಲುವು ಸಿಗೋ ಸಾಧ್ಯತೆ ದಟ್ಟವಾಗಿದೆ.

-masthmagaa.com

Contact Us for Advertisement

Leave a Reply