ಭಾರತ-ಪಾಕ್‌ ದ್ವಿಪಕ್ಷೀಯ ಸಂಬಂಧ ವೃದ್ದಿಯಾಗಲಿದೆ- ಪಾಕಿಸ್ತಾನ!‌

masthmagaa.com:

ಭಾರತದೊಂದಿಗೆ ಸಂಬಂಧ ವೃದ್ದಿ ಮಾಡ್ಕೊಂಡ್ರೆ ತನಗೆ ಉಳಿಗಾಲ ಅನ್ನೊದನ್ನ ಪಾಕ್‌ ಚೆನ್ನಾಗಿ ತಿಳ್ಕೊಂಡಂತೆ ಕಾಣಿಸ್ತಿದೆ. ಯಾಕಂದ್ರೆ ಭಾರತದೊಂದಿಗೆ ಒಮ್ಮೆ ಸಂಬಂಧ ವೃದ್ದಿ ಮಾಡ್ಕೊಳ್ತಿವೆ, ಒಮ್ಮೆ ಇಲ್ಲ ಅಂತೇಲ್ಲ ಡ್ರಾಮಾ ಮಾಡ್ತೀರೊ ಪಾಕ್‌ ಈಗ ಮತ್ತೆ ಭಾರತದ ಜೊತೆ ಸ್ನೇಹ ಬೆಳೆಸೊಕೆ ಮುಂದಾಗಿದೆ. ಭಾರತದಲ್ಲಿ ಚುನಾವಣೆ ಮುಗಿದ ನಂತ್ರ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ವೃದ್ದಿಯಾಗೋ ಭರವಸೆ ಇದೆ ಅಂತ ಪಾಕ್‌ನ ರಕ್ಷಣಾ ಸಚಿವ ಖವಜಾ ಆಸೀಫ್‌ ಹೇಳಿದ್ದಾರೆ. ಈ ಮೂಲಕ ಭಾರತ ನೆರವು ನಮಗೆ ಈಗ ಅಗತ್ಯವಾಗಿದೆ ಅನ್ನೊದನ್ನ ಪಾಕ್‌ ಸಾಬೀತು ಮಾಡೋಕೆ ಹೊರಟಿದೆ. ಅಂದ್ಹಾಗೆ ಪಾಕ್‌ ಉದ್ಯಮಿಗಳು ಭಾರತದೊಂದಿಗೆ ವ್ಯಾಪಾರ ಸಂಬಂಧ ಬೆಳೆಸೊ ಬಗ್ಗೆ ಆಸಕ್ತಿ ಹೊಂದಿದ್ದಾರೆ ಅಂತ ಪಾಕ್ ವಿದೇಶಾಂಗ ಸಚಿವರು ಹೇಳಿದ್ರು. ಬಳಿಕ ಮತ್ತೆ ಭಾರತದ ಜೊತೆ ಅಂತಹ ಯಾವ ಪ್ರಸ್ತಾವ ನಮ್ಮ ಮುಂದೆ ಇಲ್ಲ ಅಂತ ವಿದೇಶಾಂಗ ಇಲಾಖೆ ವಕ್ತಾರರು ಸ್ಪಷ್ಟನೆ ನೀಡಿದ್ರು. ಆದ್ರೆ ಈಗ ಮತ್ತೆ ಭಾರತಕ್ಕೆ ದುಷ್ಮನ್‌ಗಿರಿ ಬಿಟ್ಟು ದೋಸ್ತ್‌ ಆಗೋಣ ಬಾ ಅಂತ ಪಾಕ್‌ ಬುಲಾವ್‌ ಕೊಡ್ತಿದೆ.

-masthmagaa.com

Contact Us for Advertisement

Leave a Reply