ಪಾಕ್‌ನಲ್ಲಿ ಮತ್ತೆ ಅಧಿಕಾರಕ್ಕೇರಲು ಸಜ್ಜಾಯ್ತಾ ಇಮ್ರಾನ್‌ ಸೇನೆ?

masthmagaa.com

ಪಾಕಿಸ್ತಾನದ ಚುನಾವಣೆಯಲ್ಲಿ ಅಚ್ಚರಿ ಅನ್ನೋ ಹಾಗೇ ಅಲ್ಲಿನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಬೆಂಬಲಿತ ಅಭ್ಯರ್ಥಿಗಳು ಮುನ್ನಡೆ ಕಾದುಕೊಂಡಿದ್ದಾರೆ. ಈ ವೇಳೆ ಜೈಲಿನಲ್ಲಿರೋ ಇಮ್ರಾನ್‌ ಖಾನ್‌ ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಮತದಾನದ ಮೂಲಕ ತಮ್ಮ ಅಭಿಮತ ವ್ಯಕ್ತ ಪಡಿಸಿದ್ದಾರೆ. ಜನರ ನಿರ್ಧಾರವನ್ನ ಯಾವ ಶಕ್ತಿ, ಕುತಂತ್ರಗಳಿಂದ ಹಾಳು ಮಾಡೊಕೆ ಸಾಧ್ಯ ಇಲ್ಲ ಅಂತ ತಮ್ಮ ವಿರೋಧಿಗಳ ವಿರುದ್ದ ಹರಿಹಾಯ್ದಿದ್ದಾರೆ. ಅಲ್ದೇ ಚುನಾವಣಾ ರಿಸಲ್ಟ್‌ನಲ್ಲಿ ಲೀಡ್‌ ಹೆಚ್ತಿದ್ದಂತೆ ಇಮ್ರಾನ್‌ರ PTI ಪಾರ್ಟಿ ಎಕ್ಸ್‌ನಲ್ಲಿ, ನವಾಜ್‌ ಷರೀಫ್‌ ಹಾಗೂ ಅವ್ರ ಪಕ್ಷವನ್ನ ಪಾಕ್‌ ಜನ ಎಂದಿಗೂ ಒಪ್ಪಿಕೊಳ್ಳಲ್ಲ. ಅದಕ್ಕೆ ನೀವು ಸೋಲೊಪ್ಪಿಕೊ‍ಳ್ಳಿ ಅಂತ ನವಾಜ್‌ರ PML ಪಾರ್ಟಿಗೆ ಕಾಲೆಳಿದು ಪೋಸ್ಟ್‌ ಮಾಡಿದೆ. ಅಲ್ದೇ ಈ ಫಲಿತಾಂಶ ಪಾಕ್‌ ಪ್ರಜಾಪ್ರಭುತ್ವ ಮರುಕಳಿಸಲು ಒಂದು ಸುವರ್ಣ ಅವಕಾಶ ಅಂತೇಳಿದೆ. ಈ ಮೂಲಕ ಪಾಕ್‌ನಲ್ಲಿ ಮತ್ತೊಮ್ಮೆ ಸೇನೆ ಮತ್ತು ಇಮ್ರಾನ್‌ ಜಟಾಪಟಿ ಮುಂದುವರೆಯೋ ವಾತವರಣ ಸೃಷ್ಟಿಯಾಗಿದೆ. ಇತ್ತ ಮಾಜಿ ಪ್ರಧಾನಿ ನವಾಜ್‌ ಷರೀಫ್‌ 55 ಸಾವಿರ ವೋಟುಗಳಿಂದ ಮುನ್ನಡೆ ಕಾದುಕೊಂಡಿದಾರೆ. ಇನ್ನೊಂದೆಡೆ ನಿನ್ನೆ ಮತದಾನದ ವೇಳೆ ದೆರಾ ಇಸ್ಮಾಯಿಲ್‌ ಜಿಲ್ಲೆಯ ಉಗ್ರರ ದಾಳಿ ನಡೆದಿದೆ. ಈ ದಾಳಿಯಲ್ಲಿ 5 ಪಾಕ್‌ ಪೋಲಿಸರು ಮೃತ ಪಟ್ಟಿದ್ದಾರೆ. ಅಲ್ದೇ ಇಬ್ಬರು ಗಾಯಗೊಂಡಿದ್ದಾರೆ. ಇನ್ನು ಬಜೌರ್‌ ಕ್ಷೇತ್ರದಲ್ಲಿ ಅಭ್ಯರ್ಥಿಯ ಹತ್ಯೆ ಆಗಿರೋದ್ರಿಂದ ಅಲ್ಲಿ ಚುನಾವಣೆ ಮುಂದೂಡಲಾಗಿದೆ.

-masthmagaa.com

Contact Us for Advertisement

Leave a Reply