ಭಾರತದ ಪ್ರಧಾನಿ ಮೋದಿಯನ್ನ ಜಾಗತಿಕ ಉಗ್ರನಿಗೆ ಹೋಲಿಸಿದ ಪಾಕ್‌ ಸಚಿವ!

masthmagaa.com:

ವಿಶ್ವಸಂಸ್ಥೆಯಲ್ಲಿ ನಿನ್ನೆ ಜೈ ಶಂಕರ್‌ ಪಾಕಿಸ್ತಾನಕ್ಕೆ ಹೀನಾಮಾನವಾಗಿ ಮಂಗಳಾರಾತಿ ಮಾಡಿದ ಬೆನ್ನಲ್ಲೇ ಜಾಗತಿಕವಾಗಿ ಮತ್ತೊಮ್ಮೆ ಬೆತ್ತಲಾದ ಪಾಕಿಸ್ತಾನದ ನಾಯಕರು ಇದೀಗ ಹತಾಶೆಯ ಮಾತುಗಳನ್ನಾಡುವ ಮೂಲಕ ಭಾರತ ಪ್ರಧಾನಿಯ ವಿರುದ್ದ ನಾಲಿಗೆ ಹರಿಬಿಟ್ಟಿದ್ದಾರೆ. ಭಾರತದ ಪ್ರಧಾನಿಯನ್ನ ಜಾಗತಿಕ ಉಗ್ರನಿಗೆ ಹೋಲಿಕೆ ಭಾರಿ ವಿವಾದಾತ್ಮಕ ಹೇಳಿಕೆ ಕೊಟ್ಟಿರೋ ಪಾಕ್‌ನ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೋ ಜರ್ಧಾರಿ ಮೋದಿಯನ್ನ ಕಟುಕ ಅಂತ ಕರೆದಿದ್ದಾನೆ. ಸುದ್ದಿಗಾರರೊಂದಿಗೆ ಮಾತನಾಡಿದ ಜರ್ಧಾರಿ, ನಾನು ಭಾರತಕ್ಕೆ ಹೇಳಬೇಕು. ಒಸಮಾ ಬಿನ್ ಲಾಡೆನ್‌ ಸತ್ತು ಹೋಗಿದ್ದಾನೆ..ಆದ್ರೆ ಗುಜರಾತ್‌ನ ಕಟುಕ ಇನ್ನು ಜೀವಂತವಾಗಿದ್ದಾನೆ. ಆತ ಭಾರತಕ್ಕೆ ಪ್ರಧಾನಿ ಕೂಡ ಆಗಿದ್ದಾನೆ ಅಂತ ಹೇಳಿದ್ದಾರೆ. ಜೊತೆಗೆ RSS ವಿರುದ್ದ ಕೂಡ ಭಾರಿ ಆಕ್ರೋಶ ಹೊರ ಹಾಕಿರೋ ಪಾಕ್‌ನ ಸಚಿವ, ಆರೆಸ್ಸೆಸ್ ಹಿಟ್ಲರ್‌ನಿಂದ ಸ್ಪೂರ್ತಿ ಪಡೆದುಕೊಂಡಿರೋ ಸಂಘಟನೆ. ಮೋದಿ ಬರೋದಕ್ಕಂತ ಮುಂಚೆ ಅದನ್ನ ಅವರ ದೇಶದಲ್ಲಿ ಬ್ಯಾನ್‌ ಕೂಡ ಮಾಡಲಾಗಿತ್ತು. ಈಗ ಅದರ ಸದಸ್ಯನೇ ದೇಶದ ಪ್ರಧಾನಿ, ಅದರ ಸದಸ್ಯನೇ ಅವರ ದೇಶದ ವಿದೇಶಾಂಗ ಮಂತ್ರಿ ಅಂತ ಹೇಳಿದ್ದಾರೆ.ಅಂದ್ಹಾಗೆ ವಿಶ್ವವೇದಿಕೆಯಲ್ಲಿ ಮಾತನಾಡಿದ್ದ ವಿದೇಶಾಂಗ ಸಚಿವ ಜೈ ಶಂಕರ್‌, ಜಾಗತಿಕ ಉಗ್ರ ಬಿನ್‌ ಲಾಡೆನ್‌ಗೆ ಆಶ್ರಯ ಕೊಟ್ಟಿದ್ದ ಪಾಕಿಸ್ತಾನಕ್ಕೆ ಭಯೋತ್ಪಾದನೆ ಬಗ್ಗೆ ಮಾತನಾಡುವ ಯಾವುದೇ ಹಕ್ಕಿಲ್ಲ ಅಂತ ಹೇಳಿದ್ರು. ಇದರ ಬೆನ್ನಲ್ಲೇ ಪಾಕ್ ಸಚಿವ ಈ ರೀತಿ ಹೇಳಿದ್ದಾರೆ. ಇತ್ತ ಪಾಕ್‌ ಮೇಲೆ ಮತ್ತೊಮ್ಮೆ ದಾಳಿ ಮಾಡಿರೋ ಭಾರತದ ವಿದೇಶಾಂಗ ಸಚಿವ ಸಚಿವರು, ಈ ಬಾರಿ ಪಾಕ್‌ ಪತ್ರಕರ್ತರಿಗೂ ಚಳಿ ಬಿಡಿಸಿದ್ದಾರೆ. ಭಾರತದಿಂದ ಭಯೋತ್ಪಾದನೆಗ ಆಗ್ತಿದೆ. ಸೌತ್‌ ಏಷ್ಯಾದಲ್ಲಿ ಭಯೋತ್ಪಾದನೆ ಇನ್ನೆಷ್ಟು ದಿನ ಇರಬೇಕು ಅನ್ನೋ ಆರೋಪ ಮಾಡಿದ ಪಾಕ್‌ ಪತ್ರಕರ್ತರ ಪ್ರಶ್ನೆಗೆ ಉತ್ತರ ಕೊಟ್ಟ ಜೈ ಶಂಕರ್‌ ನೀವು ನಿಮ್ಮ ಸಚಿವರನ್ನ ಕೇಳಬೇಕು. ತಪ್ಪಾಗಿ ನನ್ನನ್ನ ಕೇಳ್ತಾ ಇದ್ದಿರಾ. ಭಯೋತ್ಪಾದನೆಗೆ ಇನ್ನೆಷ್ಟು ದಿನ ಅಭ್ಯಾಸ ಮಾಡುತ್ತೆ ನಿಮ್ಮ ದೇಶ ಅಂತ ನೀವು ನಿಮ್ಮ ಸಚಿವರನ್ನ ಕೇಳಿ ಅವರು ಸರಿಯಾಗಿ ಉತ್ತರ ಕೊಡ್ತಾರೆ ಅಂತ ಹೇಳಿದ್ದಾರೆ. ಜೊತೆಗೆ ಜಗತ್ತು ಸ್ಪುಪಿಡ್‌ ಅಲ್ಲ. ಅವರು ಯಾವುದನ್ನ ಮರೆತಿಲ್ಲ. ಪಾಕಿಸ್ತಾನ ಮೊದಲು ಶುದ್ದವಾಗಿ ಜಗತ್ತಿನ ಶಾಂತಿಗೆ ಅದು ಸಹಕಾರ ಕೊಡಬೇಕು. ಜೊತೆಗೆ ಉತ್ತಮ ನೆರೆಹೊರೆಯ ವಾತಾವರಣವನ್ನ ನಿರ್ಮಾಣ ಮಾಡಿಕೊಳ್ಳೋಕೆ ಅದು ತನ್ನ ಕೆಲಸ ಮಾಡ್ಬೇಕು..ಇದು ನಾನು ಕೊಡ್ತಿರೋ ಸಜ್ಜೆಷನ್‌ ಅಂತ ಹೇಳಿದ್ದಾರೆ. ಇನ್ನೊಂದ್ಕಡೆ ಪಾಕಿಸ್ತಾನದಲ್ಲಿ 2021ರಲ್ಲಿ ಉಗ್ರ ಹಪೀಝ್‌ ಸಯ್ಯದ್‌ ಮನೆ ಮುಂದೆ ನಡೆದ ಸ್ಪೋಟಕ್ಕೆ ಸಂಬಂಧಪಟ್ಟಂತೆ ಇದರ ಹಿಂದೆ ಭಾರತದ ಕೈವಾಡ ಇದೆ ಅಂತ ಪಾಕಿಸ್ತಾನ ಮತ್ತೆ ಆರೋಪ ಮಾಡಿದೆ. ಪಾಕಿಸ್ತಾನ ಆಂತರಿಕ ಸಚಿವ ರಾಣಾ ಸನಾವುಲ್ಲಾ ಈ ಬಗ್ಗೆ ಮಾತನಾಡಿದ್ದು ಸ್ಪೋಟದ ಹಿಂದೆ ಭಾರತದ ಹೆಜ್ಜೆಗುರುತು ಇದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply