ಭಯೋತ್ಪಾದಕತೆ ವಿರುದ್ಧ ಸಮರ ಸಾರಿದ ಪಾಕ್!

masthmagaa.com:

ಆರ್ಥಿಕ ಬಿಕ್ಕಟ್ಟಿನಲ್ಲಿರೊ ಪಾಕ್‌ ವಿದೇಶಗಳಿಂದ ಮಾಡಿರೊ ಸಾಲದಲ್ಲಿ ಮುಳುಗಿ ಹೋಗಿದೆ. ತನ್ನ ಪ್ರಜೆಗಳಿಗೆ ಸರಿಯಾಗಿ ಬೇಸಿಕ್‌ ಅವಶ್ಯಕತೆಗಳನ್ನ ಒದಗಿಸೋಕೆ ಆಗದಿರುವ ಹೊತ್ತಲ್ಲಿ, ಸಾಲವನ್ನ ಮರುಪವಾತಿ ಮಾಡಬೇಕಾಗಿದೆ. ಈ ತಿಂಗಳಿನಿಂದ ಅಂದ್ರೆ ಏಪ್ರಿಲ್‌ 2023ರಿಂದ ಜೂನ್‌ 2026ರವರೆಗೆ ಒಟ್ಟು 77.5 ಬಿಲಿಯನ್‌ ಡಾಲರ್‌ ಅಂದ್ರೆ 6.35 ಲಕ್ಷ ಕೋಟಿ ರೂಪಾಯಿಯನ್ನ ಪಾವತಿಸಬೇಕಿದೆ. ಈ ಮಾಹಿತಿಯನ್ನ ಅಮೆರಿಕದ ಪೀಸ್‌ ಇನ್‌ಸ್ಟಿಟ್ಯುಟ್‌ ಪಬ್ಲಿಷ್‌ ಮಾಡಿದೆ. ಹಣದುಬ್ಬರ, ರಾಜಕೀಯ ಬಿಕ್ಕಟ್ಟು ಹಾಗೂ ಹೆಚ್ತಿರೊ ಭಯೋತ್ಪಾದನೆಗಳ ಮಧ್ಯೆ ವಿದೇಶಿ ಸಾಲಗಳಿಂದ ದಿವಾಳಿಯಾಗೊ ಅಪಾಯದಲ್ಲಿದೆ ಅಂತ ವರದಿಯಲ್ಲಿ ಎಚ್ಚರಿಕೆ ನೀಡಲಾಗಿದೆ. ಇನ್ನೊಂದ್‌ ಕಡೆ ಪಾಕ್‌ನಲ್ಲಿ ಹೆಚ್ತಿರೊ ಭಯೋತ್ಪಾದನೆಗಳ ವಿರುದ್ದ ಅಲ್ಲಿನ ಸರ್ಕಾರ ಕಾರ್ಯಾಚರಣೆ ಕೈಗೊಂಡಿದೆ. ಪಾಕ್‌ನಲ್ಲಿ ಬ್ಯಾನ್‌ ಆಗಿರೊ ಉಗ್ರ ಗುಂಪುಗಳ ವಿರುದ್ಧ ಭಯೋತ್ಪಾದನೆ ವಿರೋಧಿ ಕಾರ್ಯಾಚರಣೆಯನ್ನ ಅನೌನ್ಸ್‌ ಮಾಡಿದೆ. ಕಳೆದ ವರ್ಷ ಪಾಕಿಸ್ತಾನ ತಾಲಿಬಾನಿ (ಟಿಟಿಪಿ) ಜೊತೆಗಿನ ಕದನ ವಿರಾಮ ವಿಫಲಗೊಂಡಿದ್ದು, ಪಾಕ್‌ನಲ್ಲಿ ಉಗ್ರ ಚಟುವಟಿಕೆಗಳು, ದಾಳಿಗಳು ಹೆಚ್ಚಾಗಿವೆ. ಈ ಹಿನ್ನಲೆ ಪಾಕ್‌ನ ರಾಷ್ಟ್ರೀಯ ಭದ್ರತಾ ಸಮಿತಿ ಸಭೆ ನಡೆಸಿದೆ. ಭಯೋತ್ಪಾದನೆಯನ್ನ ದೇಶದಿಂದ ಅಳಿಸಿಹಾಕಲು ರಾಜಕೀಯ, ರಾಜತಾಂತ್ರಿಕ ಮಾರ್ಗ ಸೇರಿದಂತೆ ಎಲ್ಲ ಮಾರ್ಗಗಳಲ್ಲೂ ಪ್ರಯತ್ನಿಸಲಾಗುತ್ತೆ ಅಂತ ಪ್ರಧಾನಿ ಕಚೇರಿ ಹೇಳಿದೆ. ಅಂದ್ಹಾಗೆ ಈ ವರ್ಷ ಜನವರಿಯಿಂದ ಮಾರ್ಚ್‌ ಅಂದ್ರೆ ಕೇವಲ 3 ತಿಂಗಳಲ್ಲಿ ಖೈಬರ್‌ ಪಂಕ್ತುಖ್ವಾ ಪ್ರಾಂತ್ಯ ಒಂದ್ರಲ್ಲೇ 127 ಪೊಲೀಸ್‌ ಆಫೀಸರ್‌ಗಳು ಉಗ್ರ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಹೀಗಾಗಿ ಪಾಕ್‌ ಟಿಟಿಪಿ ವಿರುದ್ಧ ಸಮರ ಸಾರಿದೆ.

-masthmagaa.com

Contact Us for Advertisement

Leave a Reply