ಬ್ರಿಟಿಷ್‌ ಸಂಸತ್ತಿನಲ್ಲಿ ಜಮ್ಮು-ಕಾಶ್ಮೀರ ವಿವಾದ! ಏನಾಯ್ತು?

masthmagaa.com:

ಜಮ್ಮು-ಕಾಶ್ಮೀರ ವಿವಾದದಲ್ಲಿ ಪಾಕಿಸ್ತಾನ ಕಾನೂನುಬದ್ಧ ಪಕ್ಷವಲ್ಲ ಅಂತ ಪ್ರೊಫೆಸ್ಸರ್‌ ಸಜ್ಜದ್‌ ರಾಜ ಅವರು ಬ್ರಿಟಿಷ್‌ ಸಂಸತ್ತಿನಲ್ಲಿ ನಡೆದ ಈವೆಂಟ್‌ ಒಂದರಲ್ಲಿ ಹೇಳಿದ್ದಾರೆ. ಗುರುವಾರ ಅಂದ್ರೆ ನೆನ್ನೆ ಬ್ರಿಟಿಷ್‌ ಸಂಸತ್ತಿನಲ್ಲಿ ಜಮ್ಮು-ಕಾಶ್ಮೀರ ದಿನದ ಅಂಗವಾಗಿ ನಡೆದ ಈವೆಂಟ್‌ನಲ್ಲಿ ಪಾಕ್‌ ಆಕ್ರಮಿತ ಕಾಶ್ಮೀರದ ರಾಜಕೀಯ ಕಾರ್ಯಕರ್ತರಾದ ಸಜ್ಜದ್‌ ರಾಜ ಅವರು ಜಮ್ಮು-ಕಾಶ್ಮೀರ ವಿವಾದದ ಕುರಿತು ಮಾತನಾಡಿದ್ದಾರೆ. ʻಪಾಕಿಸ್ತಾನ ಕಾನೂನುಬದ್ಧ ಪಕ್ಷವಲ್ಲ. ಅದು PoK ಜನರನ್ನ ಪ್ರಾಣಿಗಳಂತೆ ಟ್ರೀಟ್‌ ಮಾಡ್ತಾ ಇದೆ. ಜಮ್ಮು-ಕಾಶ್ಮೀರದ ಜನರಿಗೆ ಸಿಗೋ ಎಲ್ಲಾ ಸೌಲಭ್ಯಗಳನ್ನ ಪಡೆದುಕೊಳ್ಳೋ ಹಕ್ಕು ಇಲ್ಲಿನ ಜನರಿಗಿದೆʼ ಅಂತ ಹೇಳಿದ್ದಾರೆ. ಇನ್ನು ಈ ಈವೆಂಟ್‌ನಲ್ಲಿ ಭಾಗವಹಿಸಿದ್ದ ಬ್ರಿಟಿಷ್‌ ಸಂಸತ್‌ನ ಸದಸ್ಯರು, ಸ್ಪೀಕರ್‌ಗಳು ಜಮ್ಮು-ಕಾಶ್ಮೀರ ವಿವಾದದ ವಿಚಾರವಾಗಿ ಧ್ವನಿ ಎತ್ತಿದ್ದಾರೆ. ಕಾಶ್ಮೀರ ಪಂಡಿತರ ಒದ್ದಾಟದ ಬದುಕು ಮತ್ತು ಆರ್ಟಿಕಲ್‌ 370 ರದ್ದಾಗಿನಿಂದ ಜಮ್ಮು-ಕಾಶ್ಮೀರದಲ್ಲಿ ಆದಂತಹ ಬದಲಾವಣೆಗಳ ವಿಚಾರವಾಗಿ ಮಾತನಾಡಿದ್ದಾರೆ. ಅಂದ್ಹಾಗೆ ಪ್ರತೀ ವರ್ಷ ಅಟೋಬರ್‌ 26 ರಂದು ಜಮ್ಮು-ಕಾಶ್ಮೀರ ದಿನವನ್ನಾಗಿ ಆಚರಿಸಲಾಗ್ತದೆ.

-masthmagaa.com

Contact Us for Advertisement

Leave a Reply