ಪಾಕ್ ಪ್ರಧಾನಿಯಾಗ್ತಿದ್ದಂತೆ ಭಾರತದ ವಿರುದ್ದ ಬಾಲ ಬಿಚ್ಚಿದ ಶಹಬಾಜ್!

masthmagaa.com:

ಪಾಕಿಸ್ತಾನದಲ್ಲಿ ಸೇನೆಯ ಕೈಗೊಂಬೆಯಾಗಿ, ಮತ್ತೊಮ್ಮೆ ಪ್ರಧಾನಿ ಹುದ್ದೆ ಸ್ವೀಕರಿಸ್ತಿದ್ದಂತೆ ಶಹಬಾಜ್‌ ಷರೀಫ್ ಭಾರತವನ್ನ ಕೆಣಕಿ ಕಾಶ್ಮೀರದ ಬಗ್ಗೆ ಮಾತಾಡಿದ್ದಾರೆ. ಭಾನುವಾರ ಪಾಕ್‌ನ‌ ನ್ಯಾಷನಲ್ ಅಸ್ಸೆಂಬ್ಲಿಯಲ್ಲಿ 24 ನೇ ಪ್ರಧಾನಿಯಾಗಿ ಆಯ್ಕೆಯಾದ ಶಹಬಾಜ್ ತಮ್ಮ ಮೊದಲ ಭಾಷಣ ಮಾಡ್ತಾ….ʻನಾವು ಕಾಶ್ಮೀರದ ಜನರನ್ನ ಸ್ವತಂತ್ರಗೊಳ್ತೀವಿ…ಅದೇ ನಮ್ಮ ಗುರಿ ಅಂತ ಅಬ್ಬರಿಸಿದ್ದಾರೆ. ಅಷ್ಟೇ ಅಲ್ಲ ಆ ಕಡೆ ಪ್ಯಾಲಸ್ತೀನ್‌ ಜನರನ್ನೂ ಸ್ವತಂತ್ರಗೊಳಿಸ್ತೀವಿ ಅಂತ ಹೇಳಿದ್ದಾರೆ. ಇದೇ ವೇಳೆ ತಮ್ಮ ಆರ್ಥಿಕ ಪರಿಸ್ಥಿತಿಯ ಬಗ್ಗೆಯೂ ಮಾತಾಡ್ತಾ…ʻʻ ನಮಗೆ ಈಗ ಸಿಕ್ಕಾಪಟ್ಟೆ ಎಕಾನಮಿ ಪ್ರಾಬ್ಲಂ ಇದೆ. ಆರ್ಥಿಕ ಬಿಕ್ಕಟ್ಟು ದೇಶದ ಮುಂದೆ ದೊಡ್ಡ ಸವಾಲಾಗಿ ನಿಂತಿದೆ . ಸದನ ನಡೆಸೊ ಖರ್ಚನ್ನ ಸಹ ಸಾಲ ಪಡೆದ ಹಣದಿಂದಲೇ ಭರಿಸಬೇಕಾಗಿದೆ. ತೆರಿಗೆ ಹಣದಿಂದ ಸಂಸದರ ವೇತನ ನೀಡಲಾಗ್ತಿದೆ ಅಂತ ಹೇಳಿದ್ದಾರೆ. ಇನ್ನೊಂದು ಕಡೆ JUI-F ಪಕ್ಷ ದ ಮುಖ್ಯಸ್ಥ ಮೌಲಾನಾ ಫಜ್ಲುರ್‌ ರೆಹಮಾನ್‌ 2024ರ ಸಾರ್ವತ್ರಿಕ ಚುನಾವಣೆ ಫಲಿತಾಂಶದ ವಿರುದ್ದ ಪಾಕ್‌ನ ಸುಪ್ರೀಂಕೋರ್ಟ್‌ ಮೊರೆ ಹೋಗ್ತಿವಿ ಅಂತೇಳಿದ್ದಾರೆ. ಅಲ್ದೇ 2018ರಲ್ಲಿ ಪಾಕ್‌ನ ಚುನಾವಣೆಯಲ್ಲಿ ಭಾರಿ ಅಕ್ರಮ ನಡೆದಿತ್ತು. ಆದ್ರೆ ಈಗ ನಡೆದ 2024ರ ಚುನಾವಣೆ ಆ ದಾಖಲೆಯನ್ನ ಬ್ರೇಕ್‌ ಮಾಡಿದೆ ಅಂತ ಹೇಳಿದ್ದಾರೆ. ಈ ಮೂಲಕ ಪಾಕ್‌ನಲ್ಲಿ ನೂತನ ಪ್ರಧಾನಿ ಆಯ್ಕೆಯಾದ್ರು ಸಹ ಎಲೆಕ್ಷನ್‌ ಹೈಡ್ರಾಮಾ ಮಾತ್ರ ಮುಂದುವರೆದಿರೋದು ಸ್ಪಷ್ಟವಾಗಿ ಕಾಣಿಸ್ತಿದೆ.

-masthmagaa.com

Contact Us for Advertisement

Leave a Reply