ಪಾಕಿಸ್ತಾನ: ಉಪಪ್ರಧಾನಿಯಾಗಿ ಸಚಿವ ಇಶಾಕ್‌ ದಾರ್‌ ಆಯ್ಕೆ!

masthmagaa.com:

ಪಾಕಿಸ್ತಾನದಲ್ಲಿ ಹೊಸದಾಗಿ ಉಪಪ್ರಧಾನಿಯನ್ನ ಆಯ್ಕೆ ಮಾಡಲಾಗಿದೆ. ಹಾಲಿ ವಿದೇಶಾಂಗ ಸಚಿವ ಇಶಾಕ್‌ ದಾರ್‌ ಪಾಕ್‌ನ ನೂತನ ಉಪಪ್ರಧಾನಿ ಅಂತ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ ಘೋಷಿಸಿದ್ದಾರೆ. ಅಂದ್ಹಾಗೆ ಇಶಾಕ್‌ ದಾರ್‌ ಪಾಕ್‌ನಲ್ಲಿ ಪಿಎಂಎಲ್‌ಎನ್‌ ಪಕ್ಷದ ನಾಯಕರಾಗಿದ್ದು ಈ ಮುಂಚೆ ಹಣಕಾಸು ಸಚಿವರೂ ಆಗಿದ್ರು. ಈಗ ಕೌನ್ಸಿಲ್‌ ಆಫ್‌ ಕಾಮನ್ಸ್‌ ಇಂಟ್ರಸ್ಟ್‌ನ ಮೆಂಬರ್‌ ಕೂಡ ಹೌದು. ಇನ್ನು ಪಾಕಿಸ್ತಾನದಲ್ಲಿ ಇದುವರೆಗೂ ನಾಲ್ಕು ಮಂದಿ ಮಾತ್ರ ಉಪಪ್ರಧಾನಿಯಾಗಿದ್ದಾರೆ. ಮೊದಲಿಗೆ ಜುಲ್ಫಿಕರ್‌ ಅಲಿ ಭುಟ್ಟೋ ಇದ್ರು. ಅಮೇಲೆ ನುಸ್ರತ್‌ ಭುಟ್ಟೋ ಇದ್ರು. ಬಳಿಕ ಚೌಧರಿ ಪರ್ವೇಝ್‌ ಎಲಾಹಿ ಈ ಕೆಲಸ ನಿರ್ವಹಿಸಿದ್ರು. ಈಗ ಇಶಾಕ್‌ ಧಾರ್‌ರನ್ನ ಘೊಷಣೆ ಮಾಡಲಾಗಿದೆ.

-masthmagaa.com

Contact Us for Advertisement

Leave a Reply