ವೆಪನ್‌ ಸಿಸ್ಟಮ್‌ ಟೆಸ್ಟ್‌ ಮಾಡಿದ ಪಾಕಿಸ್ಥಾನ್‌: ಪಾಸಾ ಫೇಲಾ?

masthmagaa.com:

ಭಾರತದ ಬ್ಯಾಲಸ್ಟಿಕ್‌ ಮಿಸೈಲ್‌ ಡಿಫೆನ್ಸ್‌ ಸಿಸ್ಟಮ್‌ ಗುರಿಯಾಗಿಟ್ಟುಕೊಂಡು ನಿರ್ಮಿಸಿರೋ ಅಬಬೀಲ್‌ ವೆಪನ್‌ ಸಿಸ್ಟಮ್‌ ಅನ್ನ ಯಶಸ್ವಿಯಾಗಿ ಟೆಸ್ಟ್‌ ಮಾಡಿರೋದಾಗಿ ಪಾಕಿಸ್ತಾನ ಹೇಳ್ಕೊಂಡಿದೆ. ‌ಒಂದು ಕಡೆ ವಿಮಾನ ಹಾರ್ಸೋಕೆ ಇಂಧನ ಇಲ್ದೇ ಹಲವು ದೇಶೀಯ, ಅಂತರಾಷ್ಟ್ರೀಯ ಫ್ಲೈಟ್‌ಗಳನ್ನ ರದ್ದು ಮಾಡಿದೆ. ಆದ್ರೆ ಮಿಸೈಲ್‌ ಪರೀಕ್ಷೆ ಮಾಡಿರೋದಾಗಿ ಹೇಳಿದೆ. ಅಂದ್ಹಾಗೆ ದೇಶೀಯವಾಗಿ ನಿರ್ಮಿಸಲಾಗಿದೆ ಅಂತ ಪಾಕಿಸ್ತಾನ ಹೇಳ್ತಿರೋ ಈ ಮಿಸೈಲ್‌ನ ಡಿಸೈನ್‌, ಟೆಕ್ನಾಲಜಿಕಲ್‌ ಪ್ಯಾರಾಮೀಟರ್‌, ಪರ್ಫಾರ್ಮೆನ್ನ್‌ಗಳನ್ನ ಟೆಸ್ಟ್‌ ಮಾಡೋ ಸಲುವಾಗಿ ಈ ಪರೀಕ್ಷೆ ಮಾಡಲಾಗಿದೆ ಅಂತ ಪಾಕ್‌ ಆರ್ಮಿಯ ISPR(inter Service Public Relations) ಹೇಳಿಕೆ ನೀಡಿದೆ. 3,500 ಕಿಲೋಮೀಟರ್‌ ವರೆಗೂ ತಲಪಬಹುದಾದ ಈ ಮಿಸೈಲ್‌, ಅಣ್ವಸ್ತ್ರ ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ ಎನ್ನಲಾಗ್ತಿದೆ.

-masthmagaa.com

Contact Us for Advertisement

Leave a Reply