ಪಾಕ್‌ ಆತ್ಮಾಹುತಿ ದಾಳಿಗೂ, ರಷ್ಯಾದ ಉಗ್ರ ದಾಳಿಗೂ ನಂಟು!

masthmagaa.com:

ಐವರು ಚೀನಿಯರನ್ನ ಬಲಿ ಪಡೆದ ಪಾಕ್‌ನ ಆತ್ಮಾಹುತಿ ದಾಳಿಗೂ, ರಷ್ಯಾದ ಮಾಸ್ಕೊ ಉಗ್ರ ದಾಳಿಗೂ ನಂಟಿದೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ. ಖೈಬರ್‌ ಪಖ್ತುಂಖ್ವಾ ಹಾಗೂ ಬಲೂಚಿಸ್ತಾನ ಪ್ರಾಂತ್ಯದಲ್ಲಿರೊ ಪಶ್ತುನ್‌ ತಹಫುಜ್‌ ಹೆಸರಿನ ಸಾಮಾಜಿಕ ಚಳುವಳಿಯ ಕಾರ್ಯಕರ್ತ ಫಜಲ್-ಉರ್-ರೆಹಮಾನ್‌ ಆಫ್ರಿಧಿ ಈ ಆರೋಪ ಮಾಡಿದ್ದಾರೆ. ಅಲ್ದೇ ಪಾಕ್‌ ಅಷ್ಟೇ ಅಲ್ಲ ಇಡೀ ಜಗತ್ತೇ ಅಪಾಯದ ಕೆನ್ನಾಲಿಗೆಯಲ್ಲಿದೆ ಅಂತ ಆಫ್ರಿಧಿ ಹೇಳಿದ್ದಾರೆ. ಈ ಮೂಲಕ ಆಫ್ರಿಧಿ, ಯಾವಾಗಾದ್ರೂ, ಎಲ್ಲಿ ಬೇಕಾದ್ರೂ ಮತ್ತೆ ಭೀಕರ ಉಗ್ರ ದಾಳಿಯಾಗ್ಬಹುದು ಅನ್ನೊ ಸುಳಿವು ನೀಡಿದ್ದಾರೆ. ಅಲ್ದೇ ಐಎಸ್‌ ಸಂಘಟನೆ ಸೇರಿ ಎಲ್ಲ ಸಂಘಟನೆಗಳ ಉಗ್ರರೂ ಪಾಕ್‌ನಲ್ಲೇ ತರಬೇತಿ ಪಡೆದು ಜಗತ್ತಿನಾದ್ಯಂತ ದಾಳಿ ಮಾಡ್ತಿದ್ದಾರೆ. ಇದಕ್ಕೆ ಪಾಕ್‌ ಕಡಿವಾಣ ಹಾಕೋವರೆಗೂ ಉಗ್ರದಾಳಿಗಳು ನಿಲ್ಲೊದಿಲ್ಲ ಅಂತ, ಖುದ್ದು ಪಾಕ್‌ನಲ್ಲಿರೋ ಆಫ್ರಿಧಿ ಕಳವಳ ವ್ಯಕ್ತ ಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply