ಪಾಕಿಸ್ತಾನ ಪ್ರಧಾನಿಗಿಂತ ಸುಪ್ರೀಂಕೋರ್ಟ್‌ ಚೀಫ್‌ ಜಡ್ಜ್‌ ವೇತನ ಹೆಚ್ಚು!

masthmagaa.com:

ಪಾಕಿಸ್ತಾನ ಸುಪ್ರೀಂಕೋರ್ಟ್‌ ಹಾಗೂ ಅಲ್ಲಿನ ಸರ್ಕಾರದ ಮಧ್ಯದ ಬಿಕ್ಕಟ್ಟಿನ ನಡುವೆಯೇ ಪಾಕಿಸ್ತಾನ ಸುಪ್ರೀಂಕೋರ್ಟ್‌ ಚೀಫ್‌ ಜಸ್ಟೀಸ್‌ನ ವೇತನ ಅಲ್ಲಿನ ಪ್ರಧಾನಿಗಿಂತಲೂ ಜಾಸ್ತಿಯಿದೆ ಅನ್ನೊ ಮಾಹಿತಿ ಲಭ್ಯವಾಗಿದೆ. ಪಾಕ್‌ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶರ ವೇತನ ಅಲ್ಲಿನ ಅಧ್ಯಕ್ಷ, ಪ್ರಧಾನಿ, ಮಂತ್ರಿಗಳು ಹಾಗೂ ಸಂಸದರು ಸೇರಿದಂತೆ ಉನ್ನತ ಅಧಿಕಾರಿಗಳಿಗಿಂತ ಹೆಚ್ಚಿದೆ ಅಂತ ತಿಳಿದು ಬಂದಿದೆ. ಈ ಕುರಿತು ಮಾಹಿತಿ ನೀಡಿರುವ ಅಲ್ಲಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ನೂರ್‌ ಖಾನ್‌, ಅತಿಹೆಚ್ಚು ಸಂಬಳ ಪಡೆಯುವವರಲ್ಲಿ ಮುಖ್ಯ ನ್ಯಾಯಾಧೀಶರು ಮೊದಲ ಸ್ಥಾನದಲ್ಲಿದ್ದಾರೆ ಅಂತ ತಿಳಿಸಿದ್ದಾರೆ. ಇನ್ನು ಪಾಕ್‌ ಅಧ್ಯಕ್ಷ 8.9 ಲಕ್ಷ ಪಾಕಿಸ್ತಾನ ರೂಪಾಯಿ ಹಾಗೂ ಪ್ರಧಾನಿ 2 ಲಕ್ಷ ಪಾಕ್‌ ರೂಪಾಯಿ ಸಂಬಳ ಪಡೆಯುತ್ತಾರೆ. ಆದ್ರೆ ಇದೇ ವೇಳೆ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಾಧೀಶ 15.2 ಲಕ್ಷ ಪಾಕ್‌ ರೂಪಾಯಿ ಸಂಬಳ ಪಡೆಯುತ್ತಾರೆ ಅಂತ ನೂರ್‌ ಖಾನ್‌ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply