ಉಗ್ರರಿಗೆ ಪಾಕ್‌ ಬೆಂಬಲ! ಗಡಿಯಲ್ಲಿ ಹೆಚ್ಚಿದ ಟೆಲಿಕಾಮ್‌ ಟವರ್‌!

masthmagaa.com:

ಉಗ್ರರ ಕರಿನೆರಳಿನಲ್ಲಿರೋ ಪಾಕ್‌ ಸದಾ ಒಂದಲ್ಲಾ ಒಂದ್‌ ರೀತಿನಲ್ಲಿ ಉಗ್ರರ ಚಟುವಟಿಕೆಗಳಿಗೆ ಸಾಥ್‌ ನೀಡ್ತಲೇ ಬಂದಿತ್ತು. ಇದೀಗ ಉಗ್ರರಿಗೆ ಸ್ವಲ್ಪ ಹೆಲ್ಪ್‌ ಆಗ್ಲಿ…ಭಾರತಕ್ಕೆ ಸ್ವಲ್ಪ ತೊಂದರೆಯಾಗ್ಲಿ…ಅದ್ರ ಮಜಾ ತಗೋಳುವ ಅಂತ ಪಾಕ್‌ ಟೆಲಿಕಾಮ್‌ ಟವರ್‌ಗಳನ್ನ ಹೆಚ್ಚು ಮಾಡ್ತಿವೆ. ಹೀಗಂತ ಭಾರತದ ಸೇನೆ ಮಾಹಿತಿ ನೀಡಿದೆ. ಎಸ್‌…ಇತ್ತೀಚಿನ ದಿನಗಳಲ್ಲಿ ಉಗ್ರರಿಗೆ ಸಹಕಾರ ನೀಡಿ…ಭಾರತದ ಗಡಿ ನುಸುಳೋಕೆ ಪಾಕ್‌ ಟೆಲಿಕಾಮ್‌ ಟವರ್‌ಗಳನ್ನ ಜಾಸ್ತಿ ಮಾಡ್ತಿವೆ. ಅಷ್ಟೇ ಅಲ್ದೇ ಅಲ್ಲಿನ ಉಗ್ರರ ಗುಂಪು ಗುಪ್ತವಾಗಿ ಕಮ್ಯುನಿಕೇಷನ್‌ ನಡೆಸೋಕೆ ಹೈಲಿ ಎನ್ಕ್ರಿಪ್ಟೆಡ್‌ YSMS ಸರ್ವೀಸ್‌ಗಳನ್ನ ಕೂಡ ಬಳಸ್ತಿದ್ದಾರೆ. ಈ ಮೂಲಕ ಭಾರತದ ಗಡಿ ಭದ್ರತಾ ಪಡೆಗಳಿಗೆ ಪಾಕ್‌ ಉಗ್ರರ ಗುಂಪುಗಳ ನಡುವೆ ನಡೆಯೋ ಕಮ್ಯುನಿಕೇಷನ್‌ ರಿವೀಲ್‌ ಆಗದೇ ಸಿಕ್ರೇಟ್‌ ಆಗಿರ್ತದೆ. ಅಂದ್ಹಾಗೆ ಇತ್ತೀಚೆಗೆ ಜಮ್ಮು ಪ್ರದೇಶಗಳಲ್ಲಿ ನಡೆದ ಉಗ್ರರ ದಾಳಿ ಹಾಗೂ ಉಗ್ರರು ಭಾರತದ ಗಡಿ ನುಸುಳಿದ ಪ್ಯಾಟರ್ನ್‌ಗಳನ್ನ ಸರಿಯಾಗಿ ಗಮನಿಸಿ ಭಾರತೀಯ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply