ಪಾಕ್‌ನಲ್ಲಿ ಜೋರಾಯ್ತು ಚುನಾವಣಾ ಕಾವು: ಮಗನನ್ನೇ ಕೊಂದ ಅಪ್ಪ!

masthmagaa.com:

ಪಕ್ಕದ ಪಾಕಿಸ್ತಾನದಲ್ಲಿ ಚುನಾವಣೆ ಕಾವು ಜೋರಾಗ್ತಿದೆ. ಯಾವ ಮಟ್ಟಿಗೆ ಅಂದ್ರೆ ಅಪ್ಪ ಹೆತ್ತಮಗನನ್ನ ಕೊಲ್ಲೊ ಲೆವೆಲ್‌ಗೆ. ಹೌದು ಪಾಕ್‌ನಲ್ಲಿ ಮಾಜಿ ಅಧ್ಯಕ್ಷ ಇಮ್ರಾನ್‌ ಖಾನ್‌ ನೇತೃತ್ವದ ತೆಹ್ರೀಕ್‌-ಇ-ಇನ್ಸಾಫ್‌ ಪಕ್ಷದ ಧ್ವಜ ಹಾರಿಸಿದ್ದಕ್ಕೆ ತಂದೆಯೊಬ್ಬ ತನ್ನ ಮಗನನ್ನೆ ಶೂಟ್‌ ಮಾಡಿ ಕೊಂದಿದ್ದಾನೆ. ಪೇಶಾವರ್‌ನಲ್ಲಿ ಈ ಘಟನೆ ನಡೆದಿದ್ದು, ತಂದೆ ತನ್ನ ಮಗನಿಗೆ ಮನೆ ಮೇಲೆ ಹಾರಿಸಿದ್ದ PTI ಪಕ್ಷದ ಧ್ವಜ ತೆಗೆಯುವಂತೆ ಹೇಳಿದ್ದ. ಆದ್ರೆ ಇದನ್ನ ನಿರಾಕರಿಸಿದ ಮಗನಿಗೆ ತಂದೆ ಶೂಟ್‌ ಮಾಡಿದ್ದಾನೆ ಅಂತ ಅಲ್ಲಿನ ಜಿಲ್ಲಾ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. ಅಂದ್ಹಾಗೆ ಫೆಬ್ರುವರಿ 8 ರಂದು ಪಾಕ್‌ನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ.

-masthmagaa.com

Contact Us for Advertisement

Leave a Reply