ಪಾಕಿಸ್ತಾನ ವಿದೇಶಿ ವಿನಿಮಯದಲ್ಲಿ ಏರಿಕೆ! ಪಾಕ್‌ ಬಳಿ ಎಷ್ಟಿದೆ ಫಾರೆಕ್ಸ್‌?

masthmagaa.com:

ತೀವ್ರ ಆರ್ಥಿಕ ಬಿಕ್ಕಟ್ಟನ್ನ ಫೇಸ್‌ ಮಾಡ್ತಿರುವ ಪಾಕಿಸ್ತಾನಕ್ಕೆ IMF ಸಾಲ ನೀಡೋಕೆ ಒಪ್ಪಿಕೊಂಡ ಬೆನ್ನಲ್ಲೇ ಪಾಕಿಸ್ತಾನದ ವಿದೇಶಿ ವಿನಿಮಯದಲ್ಲಿ ಏರಿಕೆಯಾಗಿದೆ. ಕಳೆದ 9 ತಿಂಗಳಲ್ಲೇ ಗರಿಷ್ಠಮಟ್ಟ ತಲುಪಿರುವ ಫಾರೆಕ್ಸ್‌, ಜುಲೈ 14ರ ವೇಳೆಗೆ ಡಬಲ್‌ ಆಗಿದ್ದು, ಸಧ್ಯ ಪಾಕಿಸ್ತಾನದ ಹತ್ರ 14 ಬಿಲಿಯನ್‌ ಡಾಲರ್‌ ವಿದೇಶಿ ವಿನಿಮಯ ಇದೆ ಅಂತ ಅಲ್ಲಿನ ಸರ್ಕಾರ ಹೇಳಿದೆ. ಕಳೆದ ವಾರ ಪಾಕಿಸ್ತಾನ IMF, ಸೌದಿ ಅರೇಬಿಯಾ ಹಾಗೂ UAE ನೀಡಿರುವ ಧನ ಸಹಾಯ ಸೇರಿದಂತೆ ಒಟ್ಟು 4.2 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 34.4 ಸಾವಿರ ಕೋಟಿ ರೂಪಾಯಿ ಪಡೆದಿದೆ. ಜೊತೆಗೆ ಬೇರೆ ಕಡೆ ಬ್ಯಾಂಕುಗಳಲ್ಲಿ 5.34 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 43.7 ಸಾವಿರ ಕೋಟಿ ರೂಪಾಯಿ ಪಡೆದಿದೆ. ಹೀಗಾಗಿ ವಿದೇಶಿ ವಿನಿಮಯದಲ್ಲಿ ಏರಿಕೆಯಾಗಿದೆ ಅಂತ ಅಲ್ಲಿನ ಕೇಂದ್ರ ಬ್ಯಾಂಕ್‌ ಮಾಹಿತಿ ಹಂಚಿಕೊಂಡಿದೆ.

-masthmagaa.com

Contact Us for Advertisement

Leave a Reply