ಜೈಲಿನಿಂದ ರಿಲೀಸ್‌ಗಾಗಿ ಯಾವುದೇ ಡೀಲ್‌ ಮಾಡ್ಕೊಂಡಿಲ್ಲ: ಇಮ್ರಾನ್!

masthmagaa.com:

ಸದ್ಯ ಜೈಲಿನಲ್ಲಿರೊ ಪಾಕ್‌ನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್ ತನ್ನ ಬಿಡುಗಡೆಗಾಗಿ ಯಾವುದೇ ಡೀಲ್‌ ಮಾಡ್ಕೊಂಡಿಲ್ಲ ಅಂತೇಳಿದ್ದಾರೆ. ತಾನು ಜೈಲಿನಿಂದ ರಿಲೀಸ್‌ ಆಗೋ ವಿಚಾರವಾಗಿ ಡೀಲ್‌ ಮಾಡ್ಕೊಂಡಿರಬಹುದು ಅಂತ ಇಮ್ರಾನ್‌ ಮೇಲೆ ಆರೋಪ ಕೇಳಿ ಬಂದ ಬೆನ್ನಲ್ಲೆ ಇಮ್ರಾನ್‌ ಈ ಹೇಳಿಕೆ ನೀಡಿದ್ದಾರೆ. ಅಲ್ದೇ ನಮ್ಮ PTI ಪಕ್ಷದ ವಿರುದ್ದ ಪಾಕಿಸ್ತಾನದ ಚೀಫ್‌ ಜಸ್ಟಿಸ್‌ ಖಾಜಿ ಫೈಜ್‌ ಇಸಾ ಅವ್ರು ಪಕ್ಷಪಾತ ನೀತಿಯನ್ನ ಅನುಸರಿಸ್ತಿದ್ದಾರೆ. ನನ್ನ ಕೇಸ್‌ನ ವಿಚಾರಣೆಯಲ್ಲಿ ವಿಳಂಬ ಮಾಡ್ತಿದ್ದಾರೆ. ಹೀಗಾಗಿ ತನ್ನ ಮೇಲಿನ ಕೇಸ್‌ನ ವಿಚಾರಣೆಗಳನ್ನ ತ್ವರಿತಗೊಳಿಸುವಂತೆ ಕೋರ್ಟ್‌ಗೆ ಇಮ್ರಾನ್‌ ಮನವಿ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply