ಪಾಕಿಗಳಿಗೆ ನೂತನ ಪ್ರಧಾನಿ ಶಾಕ್​! ಶೀಘ್ರದಲ್ಲೇ ಸಬ್ಸೀಡಿ ರದ್ದು, ತೈಲ ಬೆಲೆ ಏರಿಕೆ?

masthmagaa.com:

ಅಧಿಕಾರಕ್ಕೆ ಬರುತ್ತಿದಂತೆ ಆರ್ಥಿಕ ಸವಾಲುಗಳನ್ನ ಎದುರಿಸ್ತಾ ಇರೋ ಪಾಕ್‌ನ ಶಹಬಾಜ್‌ ಷರೀಫ್‌ ಸರ್ಕಾರ, ಇಮ್ರಾನ್‌ ಖಾನ್‌ ನೀಡಿದ್ದ ತೈಲ ದರದ ಸಬ್ಸೀಡಿಗಳನ್ನ ವಾಪಸ್​​ ಪಡೆಯೋ ಬಗ್ಗೆ ಯೋಚ್ನೆ ಮಾಡ್ತಿದೆ ಅಂತ ವರದಿಯಾಗಿದೆ. ಜನಮನ್ನಣೆ ಗಳಿಸೋಕೆ ಇಮ್ರಾನ್‌ ಖಾನ್​ ಸರ್ಕಾರ ತೈಲ ದರ ಮತ್ತು ವಿದ್ಯುತ್‌ ದರಗಳಲ್ಲಿ ಸಬ್ಸೀಡಿ ನೀಡಿ ದರಗಳನ್ನ ಕಮ್ಮಿ ಮಾಡಿತ್ತು. ಆದ್ರೆ ಇದ್ರಿಂದ ಪಾಕ್‌ ಸರ್ಕಾರಕ್ಕೆ 2.06 ಬಿಲಿಯನ್‌ ಡಾಲರ್‌ ಅಂದ್ರೆ ಭಾರತದ ರೂಪಾಯಿ ಲೆಕ್ಕದಲ್ಲಿ ಸುಮಾರು 15 ಸಾವಿರ ಕೋಟಿ ಹೊರೆಯಾಗಿದೆ ಅಂತ ಪಾಕ್‌ ಆರ್ಥಿಕ ಇಲಾಖೆಯ ಉನ್ನತ ಅಧಿಕಾರಿಯೊಬ್ರು ಹೇಳಿದ್ದಾರೆ. ಇನ್ನು ಪಾಕ್‌ನ ಆರ್ಥಿಕತೆ ಸುಧಾರಿಸೋಕೆ ಪೆಟ್ರೋಲಿಯಂ ಉತ್ಪನ್ನಗಳ ದರದಲ್ಲಿ ಲೀಟರ್​ಗೆ ಬರೋಬ್ಬರಿ 120 ಪಾಕ್‌ ರೂಪಾಯಿ ಹೆಚ್ಚಿಸ್ಬೇಕು ಅಂತ ಅಲ್ಲಿನ ತೈಲ ಮತ್ತು ಅನಿಲ ನಿಯಂತ್ರಣ ಪ್ರಾಧಿಕಾರ ಹೇಳಿದೆ.

-masthmagaa.com

Contact Us for Advertisement

Leave a Reply