ಜಗತ್ತಿನ 7 ಅದ್ಭುತಗಳಲ್ಲಿ ಒಂದಾದ ಮಾಚು ಪಿಕ್ಚುಗೆ ಕಾಡ್ಗಿಚ್ಚಿನ ಭೀತಿ!

masthmagaa.com:

ಜಗತ್ತಿನ 7 ಅದ್ಭುತಗಳಲ್ಲಿ ಒಂದು ಅಂತ ಖ್ಯಾತಿಯಾಗಿರೋ ಪೆರು ದೇಶದ ಮಾಚು ಪಿಕ್ಚುಗೆ ಕಾಡ್ಗಿಚ್ಚಿನ ಬೆದರಿಕೆ ಉಂಟಾಗಿದೆ. ಮಾಚು ಪಿಕ್ಚುವಿನ ಇಂಕಾ ನಾಗರೀಕತೆಯ ಅವಶೇಷಗಳ ಹತ್ತಿರ ಗುರುವಾರ ಬೆಂಕಿ ಕಾಣಿಸಿಕೊಂಡಿದೆ. ಈಗ ಬೆಂಕಿ ಮಾಚುಪಿಕ್ಚುಗೂ ಹರಡಿಕೊಳ್ಳುವ ಭೀತಿ ಎದುರಾಗಿದೆ. ಅಂದ್ಹಾಗೆ ಅಲ್ಲಿನ ರೈತರು ಹೊಸ ಬೆಳೆಯ ಸಿದ್ದತೆಗೋಸ್ಕರ ತಮ್ಮ ಹೊಲಗಳಲ್ಲಿ ಇರೋ ಕಸ, ಹುಲ್ಲನ್ನ ಸುಟ್ಟಿದ್ದು ಈ ಬೆಂಕಿ ಅವಘಡಕ್ಕೆ ಕಾರಣವಾಗಿದೆ ಅಂತ ಹೇಳಲಾಗ್ತಿದೆ. ಈಗಾಗಲೇ 49 ಎಕ್ರೆ ಪ್ರದೇಶವನ್ನ ಬೆಂಕಿ ಆಹುತಿ ತೆಗೆದುಕೊಂಡಿದೆ. ಮಾಚು ಪಿಕ್ಚು ಪರ್ವತದ ಮೇಲಿರೋ ಕಲ್ಲಿನ ರಚನೆಯಾಗಿದ್ದು. 15ನೇ ಶತಮಾನದಲ್ಲಿ ಇದನ್ನ ನಿರ್ಮಿಸೋಕೆ ಶುರುಮಾಡಲಾಗಿತ್ತು. ಆದಾದ ಬಳಿಕ ಸ್ಪೇನ್‌ ದೇಶದ ಇದರ ಮೇಲೆ ದಾಳಿ ಮಾಡ್ತು ಅದರ ನಿರ್ಮಾಣ ಕಾರ್ಯ ಅರ್ಧದಲ್ಲೇ ನಿಲ್ತು. ಅಂದ್ಹಾಗೆ ಇದನ್ನ1983ರಲ್ಲಿ ಯುನೆಸ್ಕೋ ವಿಶ್ವಪಾರಂಪರಿಕ ತಾಣ ಅಂತ ಘೋಷಿಸಿತು.

-masthmagaa.com

Contact Us for Advertisement

Leave a Reply