2ಎ ಮೀಸಲಾತಿ ಕೋರಿ ಪಂಚಮಸಾಲಿ ಸಮುದಾಯದ ಬೃಹತ್‌ ಸಮಾವೇಶ!

masthmagaa.com:

2ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮುದಾಯದವರು ಬೆಳಗಾವಿಯಲ್ಲಿ ಬೃಹತ್‌ ಸಮಾವೇಶ ಹಮ್ಮಿಕೊಂಡಿದ್ದಾರೆ. ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ʻವಿರಾಟ್‌ ಪಂಚಶಕ್ತಿ ಸಮಾವೇಶʼ ನಡೆಯುತ್ತಿದೆ. ಸುವರ್ಣ ಸೌಧದ ಬಳಿ ಆಯೋಜಿಸಿರೊ ಸಮಾವೇಶದಲ್ಲಿ ಪಾಲ್ಗೊಳ್ಳೋಕೆ ಅಪಾರ ಸಂಖ್ಯೆಯಲ್ಲಿ ಜನ ಬರ್ತಿದ್ದಾರೆ. ಅತ್ತ ದೊಡ್ಡ ಮಟ್ಟದಲ್ಲಿ ಪಂಚಮಸಾಲಿ ಸಮುದಾಯದ ಜನರು ಪ್ರತಿಭಟನೆ ಮಾಡ್ತಿದ್ರೆ, ಇತ್ತ ಸಿಎಂ ಬಸವರಾಜ ಬೊಮ್ಮಾಯಿ ಅಧಿವೇಶನದಲ್ಲಿ ಮೀಸಲಾತಿ ಕುರಿತು ಯಾವುದೇ ನಿರ್ಣಯ ತೆಗೆದುಕೊಳ್ಳದೇ ಅಧಿವೇಶನವನ್ನ ಮುಗಿಸಿದ್ದಾರೆ. ಇನ್ನು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಕುರಿತು ಹಿಂದುಳಿದ ವರ್ಗಗಳ ಆಯೋಗದ ಮಧ್ಯಂತರ ವರದಿ ಇಂದು ಸಿಎಂ ಕೈಸೇರಿದೆ. ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್‌ ಹೆಗಡೆ ಅವ್ರು ಮುಚ್ಚಿದ ಲಕೋಟೆಯಲ್ಲಿ ಬಸವರಾಜ ಬೊಮ್ಮಾಯಿ ಅವರ ಕೈಗೆ ಹಸ್ತಾಂತರಿಸಿದ್ರು. ಬಳಿಕ ಮಾತನಾಡಿದ ಬೊಮ್ಮಾಯಿ ಮಧ್ಯಂತರ ವರದಿಯನ್ನ ಆದಷ್ಟು ಬೇಗನೇ ಎಲ್ಲ ಪಕ್ಷದ ನಾಯಕರೊಂದಿಗೆ ಕಾನೂನಾತ್ಮಕವಾಗಿ ಚರ್ಚೆ ಮಾಡಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುತ್ತೆ ಎಂದಿದ್ದಾರೆ. ಜೊತೆಗೆ ಪಂಚಮಸಾಲಿ ಮೀಸಲಾತಿ ವಿಚಾರವಾಗಿ ಹತ್ತು ದಿನಗಳವರೆಗೆ ಗಡುವು ಕೇಳಿದ ಸಿಎಂ ನಿಮ್ಮ ಸಮಸ್ಯೆ ಬಗ್ಗೆ ಸ್ಪಷ್ಟ ನಿರ್ಧಾರ ಮಾಡುತ್ತೇನೆ ಅಂತ ಆಶ್ವಾಸನೆ ನೀಡಿದ್ದಾರೆ. ಇತ್ತ 2ಎ ಮೀಸಲಾತಿ ಕುರಿತು ಡಿಸೆಂಬರ್‌ 29ಕ್ಕೆ ಬೊಮ್ಮಾಯಿ ಅವ್ರು ಅಧಿಕೃತ ಘೋಷಣೆ ಮಾಡಲಿದ್ದಾರೆ ಅಂತ ಯತ್ನಾಳ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply