ಮುಂದಿನ ದಶಕಗಳಲ್ಲಿ ಜಗತ್ತನ್ನು ಕಾಡಲಿದ್ಯಂತೆ ಮತ್ತೊಂದು ವೈರಸ್‌!

masthmagaa.com:

ಈಗಷ್ಟೇ ಕೋವಿಡ್‌ ಪ್ಯಾಂಡೆಮಿಕ್‌ನಿಂದ ಚೇತರಿಸಿಕೊಂಡಿರುವ ಜಗತ್ತಿಗೆ ಮತ್ತೊಂದು ಪ್ಯಾಂಡೆಮಿಕ್‌ ಸಂಕಷ್ಟ ತರಲಿದೆ ಅಂತ ಅಧ್ಯಯನ ಒಂದ್ರಿಂದ ತಿಳಿದು ಬಂದಿದೆ. ಮುಂದಿನ 10 ವರ್ಷದಲ್ಲಿ ನೂತನ ವೈರಸ್‌ ಜನ್ಮತಾಳುವ ಸಾಧ್ಯತೆ 27.5% ಇದೆ ಅಂತ ಆರೋಗ್ಯ ಮುನ್ಸೂಚನಾ ಸಂಸ್ಥೆಯೊಂದು ಹೇಳಿದೆ. ಹವಾಮಾನ ಬದಲಾವಣೆ, ಅಂತಾರಾಷ್ಟ್ರೀಯ ಪ್ರಯಾಣದಲ್ಲಿ ಹೆಚ್ಚಳ, ಅತಿಯಾದ ಜನಸಂಖ್ಯೆ ಸೇರಿದಂತೆ ಪ್ರಾಣಿಗಳಿಂದ ಹರಡುವ ರೋಗಗಳಿಂದ ಅಪಾಯ ಹೆಚ್ಚಾಗಲಿದೆ ಅಂತ ಬ್ರಿಟನ್‌ನ Airfinity ಲಿಮಿಟೆಡ್‌ ಅನ್ನೊ ಸಂಸ್ಥೆ ತಿಳಿಸಿದೆ. ಅಷ್ಟೆ ಅಲ್ದೆ ರೂಪಾಂತರಗೊಳ್ಳುವ ಹಕ್ಕಿಜ್ವರ ರೀತಿಯ ವೈರಸ್‌ ಒಬ್ರಿಂದ ಮತ್ತೊಬ್ರಿಗೆ ಹರಡುವ ಮೂಲಕ ಬ್ರಿಟನ್‌ನಲ್ಲಿ ಒಂದೇ ದಿನಕ್ಕ 15 ಸಾವಿರ ಜನರು ಸಾವನ್ನಪ್ಪುವ ಸಾಧ್ಯತೆಯಿದೆ ಅಂತ ಸಂಸ್ಥೆ ಅಂದಾಜಿಸಿದೆ.

-masthmagaa.com

Contact Us for Advertisement

Leave a Reply