ಪ್ಯಾಂಡೋರಾ ಪೇಪರ್ಸ್‌: ಪುಟಿನ್‌ ಆಪ್ತರು ಬಟಾಬಯಲು

masthmagaa.com:

ಪುಟಿನ್‌ ಆಪ್ತರು ಬಚ್ಚಿಟ್ಟ ಆಸ್ತಿ ವಿವರಗಳು ಈಗ ಪ್ಯಾಂಡೋರಾ ಪೇಪರ್ಸ್‌ ಹೊಸ ಪ್ರಕಟಣೆಯಲ್ಲಿ ಬಯಲಾಗಿದ್ದು, ಸುಮಾರು 800 ರಷ್ಯನ್ನರ ಮಾಹಿತಿ ಇದ್ರಲ್ಲಿ ಇದೆ ಅಂತ ಹೇಳಲಾಗ್ತಿದೆ. The International Consortium of Investigative Journalists (ICIJ) ಈ ಮಾಹಿತಿಯನ್ನ ಹೊರ ಹಾಕಿದ್ದು, ಪುಟಿನ್‌ ಆಪ್ತರು ಮತ್ತು ರಷ್ಯಾದ ರಾಜಕಾರಣಿಗಳು ಶೆಲ್‌ ಕಂಪನಿಗಳ ಮೂಲಕ ಸ್ಯಾಂಕ್ಷನ್‌ನಿಂದ ಬಚಾವಾಗಕ್ಕೆ ಹಣ ಹೂಡಿದ್ರು ಅಂತ ಹೇಳಿದೆ. ಇದ್ರಲ್ಲಿ ಪುಟಿನ್‌ನ ಮಾಜಿ ಕಮ್ಯುನಿಕೇಷನ್‌ ಮಿನಿಸ್ಟರ್‌, ಉನ್ನತ ಪ್ರಾಂತೀಯ ರಾಜಕಾರಣಿ, ಜೈಲಲ್ಲಿರೋ ಕ್ರಿಪ್ಟೋಕರೆನ್ಸಿ ತಜ್ಞ ಮತ್ತು ಒಲಿಗಾರ್ಕ್‌ಗಳು ಸೇರಿದಂತೆ ಹಲವು ಜನ ಪುಟಿನ್‌ ಆಪ್ತರು ಇದ್ದಾರೆ ಅಂತ ಐಸಿಐಜೆ ಹೇಳಿದೆ.

-masthmagaa.com

Contact Us for Advertisement

Leave a Reply