ʻಹೊಸ ಕಾಶ್ಮೀರ್‌ ಬಿಲ್‌ʼಗಳನ್ನು ಮಂಡಿಸಿದ ಅಮಿತ್‌ ಶಾ: ಪಿಒಕೆ ನಮ್ಮದು ಅಂದ್ರು!

masthmagaa.com:

ಗೃಹ ಸಚಿವ ಅಮಿತ್‌ ಶಾ ಬುಧವಾರ ಲೋಕಸಭೆಯಲ್ಲಿ ʻಜಮ್ಮು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಕಾಯ್ದೆ-2023 ಹಾಗೂ ಜಮ್ಮು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಕಾಯ್ದೆ-2023 ಅನ್ನೋ ಎರಡು ಬಿಲ್‌ಗಳನ್ನ ಮಂಡಿಸಿದ್ದಾರೆ. ಇವೆರಡನ್ನೂ ಒಟ್ಟಾಗಿ ನಯಾ ಕಾಶ್ಮೀರ್‌ ಬಿಲ್‌ಗಳು ಎನ್ನಲಾಗ್ತಿದೆ. 70 ವರ್ಷಗಳಿಂದ ತುಳಿತಕ್ಕೊಳಗಾಗಿರೋ ಕಾಶ್ಮೀರದ ಜನತೆಗೆ ಈ ಮಸೂದೆಗಳು ಘನತೆಯನ್ನ ತಂದು ಕೊಡುತ್ತವೆ ಅಂತ ಅಮಿತ್‌ ಶಾ ಹೇಳಿದ್ದಾರೆ. ಅಲ್ಲದೆ ಪಾಕ್ ಆಕ್ರಮಿತ ಕಾಶ್ಮೀರ ಆಥ್ವಾ PoK ಜಮ್ಮು ಕಾಶ್ಮೀರದ ಹಾಗೂ ಭಾರತದ ಅವಿಭಾಜ್ಯ ಅಂಗ. ಈ ಬಿಲ್‌ನಲ್ಲಿ ಮುಂಬರುವ ವಿಧಾನಸಭೆಯಲ್ಲಿ, ಅಂದ್ರೆ ಮುಂದೆ ಜಮ್ಮು ಕಾಶ್ಮೀರಕ್ಕೆ ಮತ್ತೊಮ್ಮೆ ರಾಜ್ಯದ ಸ್ಥಾನಮಾನ ಸಿಕ್ಕಾಗ, ಅಲ್ಲಿರೋ ವಿಧಾನಸಭೆ ಹಾಗೂ ಲೋಕಸಭಾ ಕ್ಷೇತ್ರಗಳನ್ನ ಪುನರ್‌ವಿಂಗಡಣೆ ಮಾಡಲಾಗುತ್ತೆ. ಆಗ ಪಿಒಕೆ ಇಂದ ವಲಸೆ ಬಂದೋರಿಗೆ ಮೀಸಲಾತಿ ನೀಡ್ತೀವಿ ಅಂತ ಅಮಿತ್‌ ಶಾ ಹೇಳಿದ್ದಾರೆ. ಇನ್ನು ಪಂಚರಾಜ್ಯ ಚುನಾವಣೆಗಳಲ್ಲಿ ಶಾಸಕರಾಗಿ ಆಯ್ಕೆಯಾದ ಕೇಂದ್ರ ಸಚಿವ ನರೇಂದ್ರ ಸಿಂಗ್‌ ತೋಮರ್‌, ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಸೇರಿ 10 ಮಂದಿ ಬಿಜೆಪಿ ಸಂಸದರು ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಿದ್ದಾರೆ.

ಇನ್ನು ರಾಜ್ಯಸಭೆಯಲ್ಲಿ ಪೋಸ್ಟ್‌ ಆಫಿಸ್‌ಗಳನ್ನು ಪುನಶ್ಚೇತನಗೊಳಿಸೊ ಬಿಲ್ಲನ್ನ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್‌ ಮಂಡಿಸಿದ್ದು, ಈ ಬಿಲ್ ಪಾಸ್‌ ಆಗಿದೆ. ಪೋಸ್ಟ್‌ ಆಫೀಸ್‌ಗಳಲ್ಲಿನ ಬ್ಯಾಂಕಿಂಗ್‌ ಸೇವೆಗಳು ಹಾಗೂ ಮೇಲ್‌ ಡೆಲಿವರಿಗಳ ಪ್ರಕ್ರಿಯೆಯನ್ನ ಸರಾಗಗೊಳಿಸೋದು ಈ ಬಿಲ್‌ನ ಉದ್ದೇಶ ಎನ್ನಲಾಗ್ತಿದೆ.

-masthmagaa.com

Contact Us for Advertisement

Leave a Reply