ಏಷ್ಯಾ-ಪೆಸಿಫಿಕ್‌ ಪ್ರದೇಶ ಯಾರ ಮನೆಯ ಹಿತ್ತಲಲ್ಲ: ಅಮೆರಿಕಕ್ಕೆ ಜಿನ್‌ಪಿಂಗ್‌ ಖಡಕ್‌ ವಾರ್ನಿಂಗ್

masthmagaa.com:

ಏಷ್ಯಾ ಪೆಸಿಫಿಕ್‌ ಪ್ರದೇಶದ ಮೇಲಿನ ಪ್ರಾಬಲ್ಯಕ್ಕಾಗಿ ಚೀನಾ, ಅಮೆರಿಕಗಳು ಕಿತ್ತಾಡ್ತಿರೋ ಹೊತ್ತಲ್ಲೇ ಅಮೆರಿಕ ವಿರುದ್ದ ಚೀನಾ ವಾಗ್ದಾಳಿ ಮಾಡಿದೆ. ಥೈಲ್ಯಾಂಡ್‌ನ ಬ್ಯಾಂಗ್‌ಕಾಕ್‌ನಲ್ಲಿ ನಡೀತಿರೊ ಏಷ್ಯಾ-ಪೆಸಿಫಿಕ್‌ ಎಕನಾಮಿಕ್‌ ಕೋಆಪರೇಷನ್(‌APEC) ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಮಾತಾಡಿದ್ದಾರೆ. ಈ ವೇಳೆ ಏಷ್ಯಾ-ಪೆಸಿಫಿಕ್‌ ಪ್ರದೇಶ ಯಾರ ಮನೆಯ ಹಿತ್ತಲಲ್ಲ ಹಾಗೂ ಈ ಪ್ರದೇಶ ಶಕ್ತಿ ಪ್ರದರ್ಶನದ ಅಖಾಡವಾಗಬಾರ್ದು ಅಂತ ಖಡಕ್‌ ಆಗಿ ಹೇಳಿದ್ದಾರೆ. ಜೊತೆಗೆ ಆ ಪ್ರದೇಶವನ್ನ ಆರ್ಥಿಕ ಹಾಗೂ ವ್ಯಾಪಾರ ಸಂಬಂಧಗಳ ಹೆಸರಿನಲ್ಲಿ ರಾಜಕೀಯ ಮಾಡೋದನ್ನ ಖಂಡಿಸಿದ್ದಾರೆ. ಷಿ ಈ ಮಾತುಗಳನ್ನ ಇನ್‌ಡೈರೆಕ್ಟ್‌ ಆಗಿ ಅಮೆರಿಕಕ್ಕೆ ಹೇಳಿದ್ದಾರೆ. ಯಾಕಂದ್ರೆ ಈ ಪ್ರದೇಶದಲ್ಲಿ ಬೆಳೆಯುತ್ತಿರೊ ಚೀನಾದ ಪ್ರಾಬಲ್ಯವನ್ನ ತಗ್ಗಿಸೋಕೆ ಅಮೆರಿಕ ತನ್ನ ಮೈತ್ರಿ ರಾಷ್ಟ್ರಗಳನ್ನ ಒಟ್ಟುಗೂಡಿಸಿ ರಾಜಕೀಯ ಸ್ಟ್ರಾಟಜಿ ಮಾಡುತ್ತೆ. ಚೀನಾವನ್ನ ಈ ಪ್ರದೇಶದಲ್ಲಿ ಬೆಳೆಯೋಕೆ ಬಿಡಬಾರ್ದು ಅನ್ನೊದು ಅಮೆರಿಕದ ಪ್ಲ್ಯಾನ್.‌ ಚೀನಾ ತನ್ನ ಪ್ರಭಾವ ಬಳಸಿ ದ್ವೀಪ ರಾಷ್ಟ್ರಗಳನ್ನ ತಮ್ಮ ಬುಟ್ಟಿಗೆ ಹಾಕಿಕೊಂಡು ಸಾಮ್ರಾಜ್ಯ ವಿಸ್ತಾರ ಮಾಡುತ್ತೆ ಅಂತ ಅಮೆರಿಕ ಇದಕ್ಕೆ ಅಡ್ಡಿಯಾಗ್ತಿರುತ್ತೆ. ಅಂದ್ಹಾಗೆ ಈ ಅಪೆಕ್‌, ಏಷ್ಯಾ ಪೆಸಿಫಿಕ್‌ ಪ್ರದೇಶದಲ್ಲಿ ಬರೊ 21 ದೇಶಗಳ ಒಕ್ಕೂಟವಾಗಿದೆ. ಆದ್ರೆ ಭಾರತ ಈ ಗುಂಪಿನ ಸದಸ್ಯ ರಾಷ್ಟ್ರವಲ್ಲ. ಇನ್ನು ತಮ್ಮ ಮೊಮ್ಮಗಳ ಮದುವೆಯಲ್ಲಿ ಬ್ಯುಸಿಯಾಗಿರೊ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅಪೆಕ್‌ ಸಭೆಗೆ ಹಾಜರಾಗಿಲ್ಲ. ಅವರ ಬದಲು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಭಾಗಿಯಾಗಿದ್ದು, ಜಿನ್‌ಪಿಂಗ್‌ ಜೊತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಬೈಡೆನ್‌ ಅವ್ರ ಸಂದೇಶವನ್ನೇ ಪುನಃ ಉಚ್ಚರಿಸಿದ್ದಾರೆ. ಉಭಯ ದೇಶಗಳ ನಡುವಿನ ಸ್ಪರ್ಧಾತ್ಮಕತೆಯನ್ನ ಜವಾಬ್ದಾರಿಯಿಂದ ಮ್ಯಾನೇಜ್‌ ಮಾಡೋಕೆ ಎರಡು ದೇಶಗಳು ಮುಕ್ತ ಮಾತುಕತೆ ನಡೆಸ್ತಿರಬೇಕು ಅಂತ ಹೇಳಿದ್ದಾರೆ. ಇದೇ ಮಾತನ್ನ ಬೈಡೆನ್‌ ಕೂಡ ಜಿ20 ಸಭೆಯಲ್ಲಿ ಹೇಳಿದ್ರು. ಇನ್ನು ಜಿ20 ಶೃಂಗಸಭೆಯನ್ನ ಮಿಸ್‌ ಮಾಡಿರೊ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಈ ಸಭೆಗೂ ಗೈರು ಹಾಜರಾಗಿದ್ದಾರೆ.

-masthmagaa.com

Contact Us for Advertisement

Leave a Reply