ನಿರ್ಮಲಾ ಸೀತಾರಾಮನ್‌ ಮೀಟ್‌ ಮಾಡಿದ ಪೇಟಿಎಂ CEO!

masthmagaa.com:

ಭಾರತದ ಫಿನ್‌ಟೆಕ್‌ನಲ್ಲಿ ಕೋಲಾಹಲ ಸೃಷ್ಟಿಸಿರೋ ಪೇಟಿಎಂ ಸತತ ಎರಡನೇ ದಿನ RBIನ ಮೀಟ್‌ ಆಗಿದೆ. ಮಂಗಳವಾರ ಪೇಟಿಎಂನ ಸಂಸ್ಥಾಪಕ ಮತ್ತುಸಿಇಒ ವಿಜಯ್‌ ಶೇಖರ್‌ ಶರ್ಮಾ ಕೇವಲ RBI ಅಧಿಕಾರಿಗಳನ್ನಷ್ಟೇ ಅಲ್ಲದೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವ್ರನ್ನೂ ಮೀಟ್‌ ಆಗಿದ್ದಾರೆ. ಈ ಭೇಟಿ ಪಾಸಿಟಿವ್‌ ಆಗಿತ್ತು ಅಂದ್ರೆ ಫಲಪ್ರದವಾಗಿತ್ತು ಅಂತ ವರದಿಯಾಗಿದೆ. ಈ ಸುದ್ದಿ ಬೆನ್ನಲ್ಲೇ ಇವತ್ತು ಕೂಡ ಪೇಟಿಎಂ ಶೇರುಗಳು ಎದ್ದಿವೆ. ಬೀಳೋವಾಗ ಲೋವರ್‌ ಸರ್ಕೀಟ್‌ ಇದ್ದಂತೆ ಏರಿಕೆಯಾಗೋಕು ಅಪ್ಪರ್‌ ಸರ್ಕೀಟ್‌ ಇತ್ತು. ಹೀಗಾಗಿ 10% ಮಾತ್ರ ಏರಿಕೆಯಾಗಿವೆ. ಇದ್ರಿಂದ 3 ಸೆಷನ್‌ಗಳಲ್ಲಿ 43% ಕುಸಿದಿದ್ದ ಪೇಟಿಎಂ ಶೇರುಗಳು 2 ದಿನದಲ್ಲಿ 13% ರೈಸ್‌ ಆದಂತೆ ಆಗಿದೆ.

-masthmagaa.com

Contact Us for Advertisement

Leave a Reply