ಅನ್ಯಗ್ರಹ ಜೀವಿಗಳಿಗಾಗಿ ವೆಬ್‌ಸೈಟ್‌ ಲಾಂಚ್‌ ಮಾಡಿದ ಅಮೆರಿಕ!

masthmagaa.com:

ಅನ್ಯಗ್ರಹ ಜೀವಿಗಳು ಅಥ್ವಾ unidentified flying objects (UFOs) ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ಅಮೆರಿಕ ಹೊಸ ವೆಬ್‌ಸೈಟ್‌ ಒಂದನ್ನ ಪರಿಚಯಿಸಿದೆ. ಈ UFOಗಳ ಕುರಿತು ತನಿಖೆ ನಡೆಸುತ್ತಿರುವ ಅಮೆರಿಕದ ಮಿಲಿಟರಿ ಆಫೀಸ್‌ ಪೆಂಟಗಾನ್‌ ಈ ಬಗ್ಗೆ ಮಾಹಿತಿ ನೀಡಿದೆ. ಈ ಅನ್ಯಗ್ರಹ ಜೀವಿಗಳ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ಧೇಶದಿಂದ All-Domain Anomaly Resolution Office (AARO) ವೆಬ್‌ಸೈಟ್‌ನ್ನ ಲಾಂಚ್‌ ಮಾಡಿದೆ. ಈ ವೆಬ್‌ಸೈಟ್‌ನ್ನ “one-stop shop” ಅಂತ ಕರೆಯಲಾಗಿದ್ದು, ವಿಚಿತ್ರ ವಿದ್ಯಮಾನಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಇದ್ರಲ್ಲಿ ದೊರೆಯಲಿದೆ. ಜೊತೆಗೆ ಈ ವೆಬ್‌ಸೈಟ್‌ನಲ್ಲಿ UFOಗಳ ಫೋಟೋಗಳು ಹಾಗೂ ವಿಡಿಯೋಗಳು ಸಿಗಲಿವೆ. UFOಗಳ ತನಿಖೆ ವಿಚಾರದಲ್ಲಿ ಪಾರದರ್ಶಕತೆಯನ್ನ ಮೆಂಟೇನ್‌ ಮಾಡಲು ಇಲಾಖೆ ಬದ್ಧವಾಗಿದೆ ಅಂತ ಪೆಂಟಗಾನ್‌ ಪ್ರೆಸ್‌ ಸೆಕ್ರೆಟರಿ ಪ್ಯಾಟ್ರಿಕ್‌ ರೈಡರ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply