ಬೆಂಗಳೂರಿನಲ್ಲಿ ಹೊಸ ಕೊಳವೆ ಬಾವಿ ತೆರೆಯಲು ಅನುಮತಿ ಕಡ್ಡಾಯ!

masthmagaa.com:

ರಾಜ್ಯ ರಾಜ್ಯಧಾನಿ ಬೆಂಗಳೂರಿನಲ್ಲಿ ದಿನೆ ದಿನೆ ನೀರಿನ ಸಮಸ್ಯೆ ಹೆಚ್ಚಾಗ್ತಿದೆ. ಹೀಗಾಗಿ ನಗರದಲ್ಲಿ ಇನ್ಮುಂದೆ ಹೊಸ ಕೊಳವೆ ಬಾವಿ(ಬೋರ್‌ವೆಲ್) ತೆರೆಯೊವ್ರಿಗೆ ರಾಜ್ಯ ಸರ್ಕಾರದ ಜಲ ಮಂಡಳಿಯಿಂದ ಪರ್ಮಿಶನ್‌ ತಗೋಬೇಕಾಗುತ್ತೆ. ಈ ಬಗ್ಗೆ ಸ್ವತಃ ಜಲ ಮಂಡಳಿಯೇ ಸುತ್ತೋಲೆ ಹೊರಡಿಸಿದ್ದು, ಕೊಳವೆ ಬಾವಿ ತೆರೆಸೊ ಮುನ್ನ ಮಾಲೀಕರು ಜಲ ಮಂಡಳಿಯ ವೆಬ್‌ಸೈಟ್‌ನಲ್ಲಿ ಅನುಮತಿ ಪಡೆಬೇಕು ಅಂತೇಳಿದೆ. ಅನುಮತಿ ಸಿಕ್ರೆ ಮಾತ್ರ ಕೊಳವೆ ಬಾವಿ ತೆರೆಸ್ಬೇಕು ಅಂತ ಮಂಡಳಿ ಸೂಚಿಸಿದೆ. ಅಂದ್ಹಾಗೆ ಮಾರ್ಚ್‌ 15ರಿಂದ ಬೆಂಗಳೂರಿನಲ್ಲಿ ಈ ನೂತನ ನಿಯಮ ಜಾರಿಯಾಗಲಿದೆ. ಇನ್ನು ನಗರದಲ್ಲಿ ಬತ್ತಿ ಹೋಗ್ತಿರೊ 50 % ಬೊರ್‌ವೆಲ್‌ಗಳ ಅಂತರ್ಜಾಲ ಮಟ್ಟ ಹೆಚ್ಚಿಸಲು ಅವುಗಳಿಗೆ ಪ್ರತಿದಿನ 1,300 ಮಿಲಿಯನ್‌ ಅಥವಾ 130 ಕೋಟಿ ಲೀಟರ್‌ ಸಂಸ್ಕರಿಸಿದ ನೀರು ಹರಿಬಿಡಲು ಜಲ ಮಂಡಳಿ ನಿರ್ಧರಿಸಿದೆ.

-masthmagaa.com

Contact Us for Advertisement

Leave a Reply