ತೆಲಂಗಾಣದಲ್ಲಿ ಪರ್ಷಿಯನ್‌ ಶಾಸನವಿರೋ ಶಿವಲಿಂಗ ರೀತಿಯ ಕಲ್ಲು!

masthmagaa.com:

ಪರ್ಷಿಯನ್‌ ಶಾಸನಗಳು ಕೆತ್ತಿರೋ ಕಲ್ಲೊಂದು ಇದೀಗ ತೆಲಂಗಾಣದ ನಾಗರ್ಕರ್ನೂಲ್‌ ಜಿಲ್ಲೆಯ ಶ್ರೀಶೈಲಂ ಕ್ಷೇತ್ರದ ಮಲ್ಲಿಕಾರ್ಜುನ ಮಂದಿರಕ್ಕೆ ಹೋಗೋ ಅರಣ್ಯ ದಾರಿಯಲ್ಲಿ ಪತ್ತೆಯಾಗಿದೆ. ಪರ್ಷಿಯನ್‌ ಶಾಸನಗಳು ಕೆತ್ತಲಾಗಿರೋ ಈ ಕಲ್ಲು ಹೆಚ್ಚಿನಾಂಶ ಶಿವಲಿಂಗದ ಹಾಗೇ ಕಾಣಿಸುತ್ತೆ ಎನ್ನಲಾಗಿದೆ. ಈ ಶಾಸನ ಹೈದರಾಬಾದ್‌ನ 8ನೇ ನಿಜಾಮ್‌ ಮುಕರಮ್‌ ಉದ್‌ ದೌಲಾ ಬಹದ್ದೂರ್‌ಗೆ ಸೇರಿದೆ. ಇದು ಸುಮಾರು ಏಪ್ರಿಲ್‌ 9, 1932 ಇಸವಿಯದಾಗಿದ್ದು, ಇದ್ರಲ್ಲಿ ಪಾಳುಭೂಮಿಯಲ್ಲಿ ಮರಗಳು ಮತ್ತು ಗಿಡಮೂಲಿಕೆಗಳನ್ನ ನೆಡುವುದರ ಬಗ್ಗೆ ಉಲ್ಲೇಖಿಸಲಾಗಿದೆ. ಹೀಗಂತ ಆರ್ಕಿಯಲಾಜಿಕಲ್‌ ಸರ್ವೇ ಆಫ್‌ ಇಂಡಿಯಾದ ಅಧಿಕಾರಿಗಳು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply