80% ಅಮೆರಿಕನ್ನರು ಚೀನಾವನ್ನ ಹೇಟ್‌ ಮಾಡ್ತಾರೆ: ವರದಿ!

masthmagaa.com:

80% ಅಮೆರಿಕನ್ನರು ಚೀನಾವನ್ನ ಹೇಟ್‌ ಮಾಡ್ತಾರೆ ಅಂತ ಅಮೆರಿಕದ ಸಮೀಕ್ಷೆಯೊಂದು ವರದಿ ಮಾಡಿದೆ. ವಾಶಿಂಗ್‌ಟನ್‌ನ ಪ್ಯೂ ರಿಸರ್ಚ್‌ ಸೆಂಟರ್‌ನ ಸರ್ವೆ ಪ್ರಕಾರ ..ಸದ್ಯ ಅಮೆರಿಕ ಹಾಗೂ ಚೀನಾ ಮಧ್ಯೆ ಭೌಗೋಳಿಕವಾಗಿ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಉದ್ವಿಗ್ನತೆ ಹೆಚ್ಚಿದೆ. ಸೋ ಹೀಗಾಗಿ ಅಮೆರಿಕದಲ್ಲಿ ಚೀನಾ ಕುರಿತು ಯಾವ ಭಾವನೆ ಇದೆ ಅನ್ನೋ ಬಗ್ಗೆ ಸರ್ವೇ ನಡೆಸಲಾಗಿತ್ತು. ಆದ್ರೆ 80 ಪರ್ಸೆಂಟ್‌ ಜನರಿಗೆ ಚೀನಾ ಕಂಡ್ರೆ ಆಗಲ್ಲ ಅನ್ನೋದು ಈ ಸರ್ವೇಯಿಂದ ಗೊತ್ತಾಗಿದೆ. ಈ ಮೂಲಕ ಕಳೆದ ಐದು ವರ್ಷಗಳಿಂದ ಅದೇ ಟ್ರೆಂಡ್‌ ಮುಂದುವರೆದಿದೆ. ಈ ಮುಂಚೆ ಕೂಡ ಸತತವಾಗಿ ಸುಮಾರು 81% ಅಮೆರಿಕನ್ನರು ಚೀನಾವನ್ನ ನೆಗೆಟಿವ್‌ ಆಗಿ ನೋಡ್ತಿದ್ದಾರೆ ಅಂತ ಈ ಸರ್ವೇ ಹೇಳಿತ್ತು.

-masthmagaa.com

Contact Us for Advertisement

Leave a Reply