ಪಾಕಿಸ್ತಾನದಲ್ಲಿ ಅಮಿತಾ ಬಚ್ಚನ್! ಇದು ನಿಜಾನಾ?

masthmagaa.com:

ಬಾಲಿವುಡ್‌ ಬಿಗ್‌ಬಿ ಅಮಿತಾ ಬಚ್ಚನ್‌ ತರ ಕಾಣಿಸುವ ಅಫ್ಘಾನಿಸ್ತಾನ ನಿರಾಶ್ರಿತನ ಫೊಟೋವೊಂದು ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಅಮಿತಾ ಬಚ್ಚನ್‌ ತರ ಕಾಣಿಸುವ ಈ ವ್ಯಕ್ತಿಯ ಹೆಸರು ಶಬೂಜ್‌. ಇವರು ಪಾಕಿಸ್ತಾನದಲ್ಲಿ ನಿರಾಶ್ರಿತರಾಗಿ ವಾಸಿಸ್ತಾ ಇದ್ದಾರೆ. ಅಂದಹಾಗೆ ಇವರ ಫೋಟೋವನ್ನ ಸ್ಟೀವ್ ಮೆಕ್ಕರಿ ಎಂಬಾತ 2018ರಲ್ಲಿ ತೆಗೆದಿದ್ದ. ಆಗಲೇ ಇದನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ. ಆದ್ರೆ ಅದೇ ಸಮಯದಲ್ಲಿ ಬಿಗ್‌ಬಿಯ ಥಗ್ಸ್‌ ಆಫ್‌ ಹಿಂದೂಸ್ಥಾನ್‌ ಸಿನಿಮಾ ಬಿಡುಗಡೆಗೆ ತಯಾರಾಗಿತ್ತು.ಇದು ಆ ಸಿನಿಮಾದಲ್ಲಿ ಬಿಗ್‌ಬಿ ನಟಿಸಿದ್ದ ಖುದಾಬಕ್ಷ್ ಎಂಬ ಪಾತ್ರದ ಮೊದಲ ಲುಕ್‌ ಅಂತ ಜನರು ಅಂದುಕೊಂಡಿದ್ರು. ಈಗ ಅದು ಫುಲ್‌ ವೈರಲ್‌ ಆಗ್ತಿದೆ.

-masthmagaa.com

Contact Us for Advertisement

Leave a Reply