ಬ್ರೆಜಿಲ್‌ನಲ್ಲಿ ಪ್ಲೇನ್‌ ಕ್ರಾಶ್, 12 ಮಂದಿ ದುರ್ಮರಣ!

masthmagaa.com:

ಲಘುವಿಮಾನವೊಂದು ಬ್ರೆಜಿಲ್‌ನ ಅಮೆಜಾನ್‌ ಕಾಡಿನಲ್ಲಿ ಪತನವಾಗಿದ್ದು, 12 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಭಾನುವಾರ ಬೆಳಿಗ್ಗೆ ಆಕ್ರೆ ರಾಜ್ಯದ ರಾಜಧಾನಿ ರಿಯೊ ಬ್ರ್ಯಾಂಕೊ ನಲ್ಲಿ ಟೇಕ್‌ ಆಫ್‌ ಆದ ಈ ವಿಮಾನ ಕೆಲವು ನಿಮಿಷಗಳಲ್ಲೆ ಪಕ್ಕದ ಕಾಡಿನಲ್ಲಿ ಪತನವಾಗಿದೆ. ಘಟನೆಯಲ್ಲಿ ಇಬ್ಬರು ಪೈಲಟ್‌, ಒಂದು ಮಗು ಸೇರಿದಂತೆ ಒಟ್ಟು 12 ಮಂದಿ ಸಾವಿಗೀಡಾಗಿದ್ದಾರೆ. ಘಟನೆಗೆ ಕಾರಣ ಇನ್ನು ತಿಳಿದುಬಂದಿಲ್ಲ.

-masthmagaa.com

Contact Us for Advertisement

Leave a Reply