PLI ಸ್ಕೀಂಗೆ ಹಿನ್ನಡೆ! ಎರಡನೇ ವರ್ಷ ಕಾಣದ ಹೂಡಿಕೆ ಬೆಳವಣಿಗೆ!

masthmagaa.com:

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ PLI (Production-Linked Incentive) ಸ್ಕೀಂ ಎರಡನೇ ವರ್ಷ ಕುಂಟುತ್ತಾ ಸಾಗಿದೆ ಅಂತ ವರದಿಯಾಗಿದೆ. ಟೆಕ್ಸ್‌ಟೈಲ್ಸ್‌, IT ಹಾರ್ಡ್‌ವೇರ್‌, ಸ್ಪೆಷಾಲಿಟಿ ಸ್ಟೀಲ್‌ ಕ್ಷೇತ್ರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಹೂಡಿಕೆ ಏರಿಕೆಯಾಗಿಲ್ಲ ಅಂತ ಸರ್ಕಾರದ ಇಲಾಖೆಗಳ ಮೀಟಿಂಗ್‌ನಲ್ಲಿ ಗೊತ್ತಾಗಿದೆ. ಅಂದ್ಹಾಗೆ ಮೇಕ್‌ ಇನ್‌ ಇಂಡಿಯಾ ಅಡಿ ಕೀ ಕ್ಷೇತ್ರಗಳಲ್ಲಿ ಭಾರತದಲ್ಲಿ ಉತ್ಪಾದನೆ ಹೆಚ್ಚಿಸೋದಕ್ಕೆ PLI ಸ್ಕೀಂನ್ನ ಜಾರಿಗೊಳಿಸಲಾಗಿತ್ತು. ಈ ಸ್ಕೀಂನಲ್ಲಿ ಒಟ್ಟು 14 ಕ್ಷೇತ್ರಗಳಲ್ಲಿ ಉತ್ಪಾದನೆಗೆ ತಕ್ಕಂತೆ ಇನ್ಸೆಂಟಿವ್‌ಗಳನ್ನ ನೀಡಲಾಗ್ತಿತ್ತು. ಅದ್ರಂತೆ ಸರ್ಕಾರ ಈ ವರ್ಷ 49,682 ಕೋಟಿ ಹೂಡಿಕೆ ನಿರೀಕ್ಷಿಸಿತ್ತು. ಆದ್ರೆ 9 ತಿಂಗಳುಗಳಲ್ಲಿ ಟಾರ್ಗೆಟ್‌ನ 61.8% ಅಂದ್ರೆ ₹30,695 ಕೋಟಿ ಹೂಡಿಕೆಯಷ್ಟೇ ಬಂದಿದೆ. ಟೆಕ್ಸ್‌ಟೈಲ್ಸ್‌, IT ಹಾರ್ಡ್‌ವೇರ್‌, ಸ್ಪೆಷಾಲಿಟಿ ಸ್ಟೀಲ್‌ ಅಷ್ಟೇ ಅಲ್ದೇ ಮೆಡಿಕಲ್‌ ಉಪಕರಣಗಳು, ಆಟೋಮೊಬೈಲ್‌, ಆಟೋಮೊಬೈಲ್‌ ಬಿಡಿಭಾಗಗಳು, ACC ಬ್ಯಾಟರಿ, ವೈಟ್‌ ಗೂಡ್ಸ್‌ ಅಂದ್ರೆ ಈ ಫ್ರಿಜ್‌, ವಾಷಿಂಗ್‌ ಮಷಿನ್‌ನಂತಹ ಗೃಹಪಯೋಗಿ ಉಪಕರಣಗಳಲ್ಲು ಅಂದುಕೊಂಡಷ್ಟು ಹೂಡಿಕೆಯಾಗಿಲ್ಲ. 2023ನೇ ಹಣಕಾಸು ವರ್ಷದಲ್ಲಿ ಎಲ್ಲಾ PLI ಸ್ಕೀಂ ಸೇರಿ ₹60,345 ಕೋಟಿ ಹೂಡಿಕೆ ನಿರೀಕ್ಷಿಸಲಾಗಿತ್ತು. ಅದಕ್ಕೆ ಬದಲಾಗಿ ₹75,917 ಹೂಡಿಕೆ ಬಂದಿತ್ತು. ಇದ್ರಿಂದ ಉತ್ಪಾದನೆ ಕೂಡ 5.78 ಲಕ್ಷ ಕೋಟಿ ಟಾರ್ಗೆಟ್‌ ಬದಲಾಗಿ 5.96 ಲಕ್ಷ ಕೋಟಿಯಾಗಿತ್ತು. 2.54 ಲಕ್ಷ ಉದ್ಯೋಗಗಳ ಬದಲಾಗಿ 3.67 ಲಕ್ಷ ಉದ್ಯೋಗ ಸೃಷ್ಟಿಯಾಗಿತ್ತು. ಆದ್ರೆ ಈ ಬಾರಿ ಗಣನೀಯ ಇಳಿಕೆ ಕಂಡಿದೆ.

-masthmagaa.com

Contact Us for Advertisement

Leave a Reply