ರಾಜ್ಯಗಳು ಟ್ಯಾಕ್ಸ್‌ ಕಡಿಮೆ ಮಾಡ್ಬೇಕು ಎಂದ ಮೋದಿಗೆ ಸಿಎಂಗಳ ತಿರುಗೇಟು!

masthmagaa.com:

ನಿನ್ನೆ ಮೋದಿ ನಡೆಸಿದ ಕೋವಿಡ್‌ ಕುರಿತ ಸಿಎಂಗಳ ಸಭೆಯಲ್ಲಿ ಪೆಟ್ರೋಲ್‌ ಡೀಸೆಲ್‌ ಮೇಲೆ VAT ವ್ಯಾಲ್ಯೂವ್‌ ಆಡೆಡ್‌ ಟ್ಯಾಕ್ಸ್‌ ಅನ್ನ ಕಡಿಮೆ ಮಾಡ್ಬೇಕು ಅಂತ ಬಿಜೆಪಿಯೇತರ ರಾಜ್ಯಗಳನ್ನ ಗುರಿಯಾಗಿಸಿ ಹೇಳಿದ್ರು. ಇದಕ್ಕೆ ಈಗ ತಿರುಗಿ ಬಿದ್ದಿರೋ ಬಂಗಾಳ, ಮಹಾರಾಷ್ಟ್ರ ಹಾಗು ತೆಲಂಗಾಣ ಸಿಎಂಗಳು ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿ ಪ್ರಧಾನಿಯವರ ಮಾತು ಸಂಪೂರ್ಣವಾಗಿ ಒಂದು ಸೈಡ್‌ ಇತ್ತು. ಇಲ್ಲಿ ರಾಜ್ಯಗಳ ಸಿಎಂಗಳಿಗೆ ಮಾತಾಡಲು ಯಾವುದೇ ಸ್ಕೋಪ್‌ ಇರ್ಲಿಲ್ಲ ಅಂತ ಹೇಳಿದ್ರು. ಇನ್ನು ಮಹಾರಾಷ್ಟ್ರ ಸಿಎಂ ಉದ್ದವ್‌ ಠಾಕ್ರೆ ಮಾತನಾಡಿ, “ಮೋದಿ ತೈಲ ಏರಿಕೆ ಯಾಕೆ ಆಗ್ತಿದೆ ಅಂತ ಹೇಳ್ಳಿಲ್ಲ. ರಾಜ್ಯಗಳ ಟ್ಯಾಕ್ಸ್‌ ಬಗ್ಗೆಯೇ ಮಾತನಾಡಿದ್ರು ಅಂತ ಆರೋಪ ಮಾಡಿದ್ರು. ಇನ್ನು ತೆಲಂಗಾಣ ಸಿಎಂ ಕೆಸಿಆರ್‌ ಕೇಂದ್ರ ಸರ್ಕಾರವೇ ಯಾಕೆ ಟ್ಯಾಕ್ಸ್‌ ಕಡಿಮೆ ಮಾಡ್ಬಾರ್ದು ಅಂತ ಆಕ್ರೋಶ ಹೊರಹಾಕಿದ್ದಾರೆ.

-masthmagaa.com

Contact Us for Advertisement

Leave a Reply