ಅವರೊಬ್ಬ ʻದೇಶಭಕ್ತʼ : ಮೋದಿಯನ್ನ ಹಾಡಿಹೊಗಳಿದ ಪುಟಿನ್‌

masthmagaa.com:

ಯುಕ್ರೇನ್‌ ಮೇಲೆ ಯುದ್ಧಸಾರಿ ಇಡೀ ವಿಶ್ವಕ್ಕೆ ಸುದ್ದಿಯ ಸರಕಾಗಿರೋ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌, ಪ್ರಧಾನಿ ಮೋದಿಯವ್ರನ್ನ ʻರಾಷ್ಟ್ರಭಕ್ತʼ ಅಂತ ಹಾಡಿ ಹೊಗಳಿದ್ದಾರೆ. ಮಾಸ್ಕೋ ಮೂಲದ ʻಥಿಂಕ್‌ ಟ್ಯಾಂಕ್‌ʼ ಅಥವಾ ಚಿಂತಕರ ಚಾವಡಿಯಾದ ʼವಾಲ್ದೈʼ ಚರ್ಚಾ ಕ್ಲಬ್‌ನಲ್ಲಿ ವಾರ್ಷಿಕ ಭಾಷಣ ಮಾಡಿರೋ ಅವ್ರು, ಮೋದಿಯವ್ರ ಸ್ವತಂತ್ರ ವಿದೇಶಾಂಗ ನೀತಿಯನ್ನ ಕೊಂಡಾಡಿದ್ದಾರೆ. ಪ್ರಧಾನಿ ಮೋದಿ ಅವ್ರ ನಾಯಕತ್ವದಲ್ಲಿ ಭಾರತದಲ್ಲಿ ಮಹತ್ವದ ಕಾರ್ಯಗಳಾಗಿವೆ, ಅವ್ರೊಬ್ಬ ದೇಶಭಕ್ತ. ಅವ್ರ ʻಮೇಕ್‌ ಇನ್‌ ಇಂಡಿಯಾʼ ಕಲ್ಪನೆ ಆರ್ಥಿಕವಾಗಿ ಮತ್ತು ನೈತಿಕವಾಗಿ ಮಹತ್ತರವಾಗಿದೆ. ಭವಿಷ್ಯ ಭಾರತದ್ದಾಗಿರಲಿದೆ ಅಂತ ಹೇಳಿದ್ದಾರೆ. ಜೊತೆಗೆ ಬ್ರಿಟಿಷ್‌ ವಸಾಹತುಶಾಹಿಯಿಂದ ಈಗಿನ ಆಧುನಿಕ ರಾಷ್ಟ್ರವಾಗಿರೋ ಭಾರತ ಅಭಿವೃದ್ಧಿಯಲ್ಲಿ ಮಹತ್ತರ ಪ್ರಗತಿ ಸಾಧಿಸಿದೆ ಎಂದಿದ್ದಾರೆ. ಇನ್ನು, ಭಾರತದ ಕೃಷಿಗೆ ಬಹಳ ಮುಖ್ಯವಾದ ರಸಗೊಬ್ಬರಗಳ ಪೂರೈಕೆಯನ್ನ ಹೆಚ್ಚಿಸಲು ಪ್ರಧಾನಿ ಮೋದಿ ನನ್ನನ್ನ ಕೇಳಿದ್ರು, ಅದನ್ನ ನಾವು 7.6 ಪಟ್ಟು ಹೆಚ್ಚಿಸಿದ್ದೇವೆ. ಕೃಷಿಯಲ್ಲಿ ವ್ಯಾಪಾರ ಡಬಲ್‌ ಆಗಿದೆ ಅಂತ ಕೂಡ ಹೇಳಿದ್ದಾರೆ. ಇನ್ನು ಇತ್ತೀಚೆಗೆ ತೈಲ ಉತ್ಪಾದನೆಯನ್ನ ಖಡಿತಗೊಳಿಸಿ ಪರೋಕ್ಷವಾಗಿ ತಮಗೆ ಸಹಾಯ ಮಾಡಿದ ಸೌದಿ ರಾಜ ಎಂಬಿಎಸ್‌ನನ್ನ ಕೂಡ ಪುಟಿನ್‌ ಹೊಗಳಿದ್ದಾರೆ. ಜೊತೆಗೆ ತೈವಾನ್‌ ಸೇರ್ಪಡಿಸಿಕೊಳ್ಳೋ ಚೀನಾದ ನೀತಿಗು ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇನ್ನು ಇದೇ ವೇಳೆ, ಯುಕ್ರೇನ್‌ ಮೇಲೆ ನ್ಯೂಕ್ಲಿಯರ್‌ ದಾಳಿ ವಿಚಾರವನ್ನ ಕೂಡ ಪುಟಿನ್‌ ತಳ್ಳಿ ಹಾಕಿದ್ದಾರೆ. ಅಮೆರಿಕ ಮತ್ತು ಪಾಶ್ಚೀಮಾತ್ಯ ದೇಶಗಳ ಮೇಲೆ ಹರಿಹಾಯ್ತಾ ಮಾತಾಡಿದ ಅವ್ರು, ಯುಕ್ರೇನ್‌ ಮೇಲೆ ನ್ಯೂಕ್ಲಿಯರ್‌ ದಾಳಿ ನಡೆಸೋ ಅಗತ್ಯ ಇಲ್ಲ, ಅಮೆರಿಕ ಮತ್ತು ಯುರೋಪ್‌ ದೇಶಗಳು ಅಣ್ವಸ್ತ್ರ ಯುದ್ಧದ ಬಗ್ಗೆ ಮತಾಡಿದ್ದಕ್ಕೆ ನಾವು ರೆಸ್ಪಾಂಡ್‌ ಮಾಡಿದ್ವಿ ಅಷ್ಟೇ ಅಂತ ಹೇಳಿದ್ದಾರೆ. ಜೊತೆಗೆ ಅಮೆರಿಕ ಮತ್ತು ಅದ್ರ ಮಿತ್ರ ರಾಷ್ಟ್ರಗಳು ಯುಕ್ರೇನ್‌ಗೆ ಶಸ್ತ್ರಾಸ್ತ್ರ ಸಪ್ಲೈ ಮಾಡಿ ಜಾಗತಿಕ ಪ್ರಾಬಲ್ಯ ಸಾಧಿಸಲು ʻಡರ್ಟಿ ಗೇಮ್‌ʼ ಆಡ್ತಿವೆ. ಆದ್ರೆ ಶೀಘ್ರದಲ್ಲಿ ಹೊಸ ಪವರ್‌ ಸೆಂಟರ್‌ಗಳು ಉದಯಿಸಲಿವೆ. ಜಗತ್ತು ಮಲ್ಟಿಪೊಲಾರ್‌ ಆಗಲಿದೆ, ಅಂದ್ರೆ ಪವರ್‌ ಕೇವಲ ಒಂದೆರಡು ದೇಶಗಳ ಕೈಯಲ್ಲಿ ಇರಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply