ರಾಷ್ಟ್ರ ರಾಜಕಾರಣದಲ್ಲಿ ಮೋದಿ ಮತ್ತು ರಾಹುಲ್‌ ಮಧ್ಯೆ ‘ಶಕ್ತಿ’ ಸಮರ!

masthmagaa.com:

ರಾಷ್ಟ್ರ ರಾಜಕಾರಣದಲ್ಲಿ ಈಗ ‘ಶಕ್ತಿ’ ಸಮರ ಶುರುವಾಗಿದೆ! 2024ರ ಲೋಕಸಭಾ ಚುನಾವಣೆ ‘ಶಕ್ತಿ’ಯ ಉಪಾಸಕರು ಹಾಗೂ ‘ಶಕ್ತಿ’ಯನ್ನು ನಿರ್ನಾಮ ಮಾಡಲು ಹೊರಟಿರುವವರ ನಡುವಣ ಯುದ್ಧ ಅಂತ ಪ್ರಧಾನಿ ಮೋದಿ ಬಣ್ಣಿಸಿದ್ದಾರೆ. ಅಂದ್ಹಾಗೆ ಭಾನುವಾರ ಅಂತ್ಯಗೊಂಡ ಭಾರತ್ ಜೋಡೋ ನ್ಯಾಯ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನಾವು ಬಿಜೆಪಿ ವಿರುದ್ಧನೂ ಹೋರಾಡ್ತಿಲ್ಲ, ವ್ಯಕ್ತಿ ವಿರುದ್ದನೂ ಹೋರಾಡ್ತಿಲ್ಲ. ಇಲ್ಲಿ ಒಬ್ಬ ವ್ಯಕ್ತಿಯನ್ನ ತಮ್ಮ ಮುಖ ಮಾಡಿ ಮುಂದಿಡಲಾಗ್ತಿದೆ. ಹಿಂದೂ ಧರ್ಮದಲ್ಲಿ ‘ಶಕ್ತಿ’ ಎಂಬ ಪದ ಇದೆ. ನಾವು ಈ ಶಕ್ತಿಯ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಈ ಶಕ್ತಿ ಯಾವುದು ಅಂದ್ರೆ… ಉದಾಹರಣೆಗೆ ಇಲ್ಯಾರೋ ಹೇಳಿದ್ರು ರಾಜನ ಆತ್ಮ ಇವಿಎಂ ಯಂತ್ರದಲ್ಲಿರುತ್ತೆ. ಇಡಿ, ಸಿಬಿಐ ಹಾಗೂ ಐಟಿ ಎಲ್ಲದ್ರಲ್ಲೂ ರಾಜನ ಆತ್ಮ ಇದೆ ಅಂತ ಪರೋಕ್ಷವಾಗಿ ಮೋದಿಯನ್ನ ಟೀಕಿಸಿದ್ರು. ಅಲ್ಲದೇ ನನ್ನ ತಾಯಿ ಮುಂದೆ ಒಬ್ಬ ನಾಯಕರು ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರುವಾಗ ಅತ್ಕೊಂಡು ಈ ಶಕ್ತಿ ಮುಂದೆ ನನಗೆ ಹೋರಾಡೋಕೆ ಆಗ್ತಿಲ್ಲ ಅಂತ ಹೇಳಿದ್ರು ಅಂತ ರಾಹುಲ್‌ ಹೇಳಿದ್ರು. ಇದಕ್ಕೆ ರಿಯಾಕ್ಟ್‌ ಮಾಡಿರೋ ಪ್ರಧಾನಿ ಮೋದಿ, ಕೆಲವರು ಶಕ್ತಿಯನ್ನು ನಿರ್ನಾಮ ಮಾಡಬೇಕು ಎಂದು ಕರೆ ನೀಡಿದ್ದಾರೆ, ಅವರ ವಿರುದ್ಧ ನಮ್ಮ ಸಮರ ಎನ್ನುವ ಮೂಲಕ ಪರೋಕ್ಷವಾಗಿ ರಾಹುಲ್ ಗಾಂಧಿ ವಿರುದ್ದ ಪ್ರಧಾನಿ ಮೋದಿ ಹರಿಹಾಯ್ದಿದ್ದಾರೆ. ಚಂದ್ರಯಾನ ನೌಕೆ ಲ್ಯಾಂಡ್ ಆದ ಜಾಗಕ್ಕೆ ಶಿವ ಶಕ್ತಿ ಪಾಯಿಂಟ್ ಎಂದು ನಾವು ಹೆಸರಿಟ್ಟು ಗೌರವ ನೀಡಿದೆವು. ಆದರೆ, ಕೆಲವರು ಶಕ್ತಿಯನ್ನು ನಿರ್ನಾಮ ಮಾಡುವ ಮಾತನ್ನಾಡುತ್ತಿದ್ಧಾರೆ ಅಂತ ಕಿಡಿಕಾರಿದ್ದಾರೆ.

-masthmagaa.com

Contact Us for Advertisement

Leave a Reply