ಯುಕ್ರೇನ್‌-ರಷ್ಯಾ ಸಂಘರ್ಷದಲ್ಲಿ ಪ್ರಧಾನಿ ಮೋದಿ ಪ್ರಮುಖ ಪಾತ್ರ ವಹಿಸುತ್ತಾರೆ! ಹೇಳಿದ್ಯಾರು?

masthmagaa.com:

ಯುಕ್ರೇನ್‌ಗೆ ಸಹಾಯ ಮಾಡೋ ನಿಟ್ಟಿನಲ್ಲಿ ಜಾಗತಿಕ ದೇಶಗಳು ನಿರ್ಧಾರ ತೆಗೆದುಕೊಳ್ಳುವಲ್ಲಿ ಅಸಮರ್ಥರಾಗಿದ್ದಾರೆ. ಇದ್ರಿಂದ ನಮ್ಮ ಅನೇಕ ಜನರು ಸಾವನ್ನಪ್ತಿದಾರೆ ಅಂತ ಯುಕ್ರೇನ್‌ ತನ್ನ ಮಿತ್ರ ರಾಷ್ಟ್ರಗಳ ಮೇಲೆ ಆರೋಪ ಮಾಡಿದೆ. ನೀವು ನಿರ್ಧಾರ ತೆಗೆದುಕೊಳ್ಳೋದು ಒಂದು ದಿನ ಲೇಟ್‌ ಆದ್ರೂ, ಯುಕ್ರೇನ್‌ ಪ್ರಜೆಗಳು ಸಾವನ್ನಪ್ತಾರೆ. ಹೀಗಾಗಿ ಬೇಗನೇ ಯೋಚಿಸಿ ಅಂತ ಯುಕ್ರೇನ್‌ ಅಧ್ಯಕ್ಷರ ಸಲಹೆಗಾರ ಮೈಖಿಲೊ ಪೊಡೊಲಿಯಾಕ್‌ ಹೇಳಿದ್ದಾರೆ. ಅಂದ್ಹಾಗೆ ಜರ್ಮನಿಯ ಹೆವಿ ಟ್ಯಾಂಕ್‌ ಆದ ʻಲೆಪರ್ಡ್‌ 2 ಟ್ಯಾಂಕ್‌ʼಗಳನ್ನ ನೀಡೋ ಕುರಿತು ಇನ್ನು ನಿರ್ಧಾರ ತೆಗೆದುಕೊಂಡಿಲ್ಲ. ಈ ಬಗ್ಗೆ ಸಭೆ ಮಾಡಿ, ಬಳಿಕ ಮಾತಾಡಿದ್ದ ಜರ್ಮನಿಯ ರಕ್ಷಣಾ ಸಚಿವ, ಟ್ಯಾಂಕ್‌ಗಳನ್ನ ಪೂರೈಸೋದಾ ಅಥವಾ ಇಲ್ಲವಾ, ಒಂದ್ವೇಳೆ ಪೂರೈಸೋದೆ ಆದ್ರೆ ಯಾವಾಗ ಅನ್ನೊದನ್ನ ಈವಾಗ್ಲೇ ಹೇಳೋಕಾಗಲ್ಲ ಅಂದಿದ್ದಾರೆ. ಸೋ ಯುಕ್ರೇನ್‌ ನೀವು ಬೇಗನೇ ಡಿಸಿಜನ್‌ ತಗೋಬೇಕು ಅಂತ ಒತ್ತಾಯಿಸ್ತಿದೆ. ಇನ್ನೊಂದ್‌ ಕಡೆ ಯುಕ್ರೇನ್‌ ಹಾಗೂ ರಷ್ಯಾ ಸಂಘರ್ಷವನ್ನ ಕೊನೆ ಮಾಡೋಕೆ ಯಾರಾದ್ರೂ ಮಾತುಕತೆಗೆ ವೇದಿಕೆ ಸಿದ್ದಗೊಳಿಸಬೇಕು. ಈ ವಿಷಯದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಪ್ರಮುಖ ಪಾತ್ರ ವಹಿಸಬಲ್ಲರು ಅಂತ ಹಿರಿಯ ಫ್ರೆಂಚ್‌ ಪತ್ರಕರ್ತೆ ಲಾರಾ ಹೈಮ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply