ದೀಪಾವಳಿ ಆಚರಣೆಗೆ ಈ ಬಾರಿ ಹಿಮಾಚಲಕ್ಕೆ ಹಾರಿದ ಪ್ರಧಾನಿ ಮೋದಿ!

masthmagaa.com:

ಪ್ರತಿ ವರ್ಷದಂತೆ ಈ ವರ್ಷವೂ ಪ್ರಧಾನಿ ನರೇಂದ್ರ ಮೋದಿ ದೀಪಾವಳಿಯನ್ನ ಸೈನಿಕರ ಜೊತೆ ಆಚರಿಸಿದ್ದಾರೆ. ಇಂದು ಬೆಳಿಗ್ಗೆ ಹಿಮಾಚಲ ಪ್ರದೇಶದ ಚೀನಾ ಗಡಿ ಬಳಿ ಇರೊ ಲೆಪ್ಚಾ ಎಂಬ ಹಳ್ಳಿಗೆ ಮೋದಿ ಹಾರಿದ್ದಾರೆ. ಸೈನಿಕರಿಗೆ ಸಿಹಿ ತಿನ್ನಿಸಿದ ಮೋದಿ “ನಮ್ಮ ವೀರ ಸೈನಿಕರ ಜೊತೆ ಹಬ್ಬ ಆಚರಿಸೋದ್ರಿಂದ ತುಂಬಾ ಎಮೋಶನಲ್‌ ಮತ್ತು ಪ್ರೌಡ್‌ ಫೀಲ್‌ ಆಗತ್ತೆ. ತಮ್ಮ ಕುಟುಂಬಗಳಿಂದ ದೂರವಾಗಿ, ಟಫ್‌ ಕಂಡೀಷನ್‌ಗಳಲ್ಲಿ ಕೆಲಸ ಮಾಡಿ ನಮಗೆ ಭದ್ರತೆ ಕೊಡ್ತಾರೆ. ನಮ್ಮ ಹೀರೋಗಳಿಗೆ ಯಾವಗಲೂ ನಾವು ಗ್ರೇಟ್‌ಫುಲ್‌ ಆಗಿ ಇರ್ತೇವೆ. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಷಯಗಳು. ಎಲ್ಲರಿಗೂ ಈ ಹಬ್ಬ ಖುಷಿ, ಸಮೃದ್ದಿ, ಅದ್ಭುತ ಆರೋಗ್ಯವನ್ನ ತರಲಿ” ಅಂದಿದ್ದಾರೆ. ಇತ್ತ ಭಾರತದಲ್ಲಿನ ಅಮೆರಿಕನ್ ಎಂಬಸಿಯಲ್ಲಿ ದೀಪಾವಳಿ ಆಚರಣೆ ಜೋರಾಗಿದೆ. ಅಮೆರಿಕ ರಾಯಭಾರಿ ಎರಿಕ್‌ ಗಾರ್ಸೆಟ್ಟಿ ಫುಲ್‌ ಹಬ್ಬದ ಮೋಡ್‌ನಲ್ಲಿ ಕುಟುಂಬ, ಸಹೋದ್ಯೋಗಿಗಳ ಜೊತೆ ಎಂಜಾಯ್‌ ಮಾಡಿದ್ದಾರೆ. ಸಾಂಪ್ರದಾಯಿಕ ಉಡುಗೆ ತೊಟ್ಟು, ಸಿಹಿ ಹಂಚಿ, ಚೆಯ್ಯಾ ಚೆಯ್ಯಾ ಹಾಡಿಗೆ ಸ್ಟೆಪ್‌ ಹಾಕಿ ಸಂಭ್ರಮಿಸಿದ್ದಾರೆ.

-masthmagaa.com

Contact Us for Advertisement

Leave a Reply