ಭಾರತವನ್ನ ಶಬ್ದಗಳಲ್ಲಿ ವರ್ಣಿಸೋಕೆ ಸಾಧ್ಯವಿಲ್ಲ…ಹೃದಯದಿಂದ ಅನುಭವಿಸಬೇಕು: ಪ್ರಧಾನಿ ಮೋದಿ

masthmagaa.com:

ಭಾರತವನ್ನ ಶಬ್ದಗಳಲ್ಲಿ ವರ್ಣಿಸೋಕೆ ಸಾಧ್ಯವಿಲ್ಲ. ಅದನ್ನ ಹೃದಯದಿಂದ ಅನುಭವಿಸಬೇಕು ಅಂತ ಪ್ರಧಾನಿ ಮೋದಿ ಹೇಳಿದ್ದಾರೆ. ವಿಶ್ವದ ಅತಿ ಉದ್ದದ ನದಿ ಕ್ರೂಸ್ ‘ಎಂವಿ ಗಂಗಾ ವಿಲಾಸ್’ ಅನ್ನ ಸ್ವಕ್ಷೇತ್ರ ವಾರಣಾಸಿಯಲ್ಲಿ ವೀಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ ಮೋದಿ, ಈ ದಶಕ ಭಾರತದಲ್ಲಿ ಮೂಲಭೂತ ಸೌಕರ್ಯಗಳನ್ನ ನಿರ್ಮಾಣ ಮಾಡುವ ದಶಕ. ನಾವು ಊಹಿಸಬಹುದಾದ ಎಲ್ಲವನ್ನೂ ಭಾರತ ಹೊಂದಿದೆ. ಅಥವಾ ಅದಕ್ಕಿಂತ ಜಾಸ್ತಿಯೇ ನಮ್ಮ ದೇಶದಲ್ಲಿದೆ. ಭಾರತವನ್ನು ಶಬ್ದಗಳಲ್ಲಿ ವರ್ಣಿಸಲು ಸಾಧ್ಯ ಇಲ್ಲ. ಭಾರತ ಮಾತೆ ಪ್ರತಿಯೊಬ್ಬರಿಗೂ ಬೇಧ ಇಲ್ಲದೇ ತನ್ನ ಹೃದಯವನ್ನು ತೆರೆದಿಟ್ಟಿದ್ದಾಳೆ. ಭಾರತವನ್ನ ಹೃದಯದಿಂದ ಅನುಭವಿಸಲು ಮಾತ್ರ ಸಾಧ್ಯ ಅಂತ ಹೇಳಿದಾರೆ. ಅಲ್ದೇ ವಿಶ್ವದ ಅತಿ ಉದ್ದದ ರಿವರ್ ಕ್ರೂಸ್ ಸೇವೆಯನ್ನು ಗಂಗಾ ನದಿಯಲ್ಲಿ ಆರಂಭಿಸಿರುವುದು ಭಾರತದ ಮಟ್ಟಿಗೆ ದೊಡ್ಡ ಸಾಧನೆ. ಇದು ಭಾರತದ ಪ್ರವಾಸೋದ್ಯಮಕ್ಕೆ ಹೊಸ ಭಾಷ್ಯವನ್ನು ಬರೆಯುತ್ತೆ. ಕ್ರೂಸ್ ಹಾದು ಹೋದಾಗ ಅಲ್ಲಿ ಹೊಸ ಅಭಿವೃದ್ಧಿ ಹುಟ್ಟಿಕೊಳ್ಳುತ್ತದೆ ಅಂತ ಬಣ್ಣಿಸಿದ್ದಾರೆ. ಇನ್ನು ಇದೇ ಕಾರ್ಯಕ್ರಮದ ಜೊತೆಗೆ ಮೋದಿ 1000 ಕೋಟಿರೂಪಾಯಿಗಳ ಅನೇಕ ಯೋಜನೆಗಳಿಗೂ ಚಾಲನೆ ನೀಡಿದ್ದಾರೆ. ಅಂದಹಾಗೆ ಈ ಅತಿದೊಡ್ಡ ರಿವರ್‌ ಕ್ರೂಸ್‌ನ ವಿಶೇಷತೆ ಏನು? ಏನೆಲ್ಲಾ ಇದೆ ಅದ್ರಲ್ಲಿ ಅನ್ನೋದ್ರ ಕುರಿತು ಇವತ್ತೇ ಒಂದು ವರದಿಯನ್ನ ಪಬ್ಲಿಶ್‌ ಮಾಡಿದ್ದೀವಿ. ನೀವು ಅದನ್ನ ವೀಕ್ಷಿಸಬೋದು.

-masthmagaa.com

Contact Us for Advertisement

Leave a Reply