ದುಬೈನಲ್ಲಿ ಭಾರತ್‌ ಮಾರ್ಟ್‌! ಪ್ರಧಾನಿ ಮೋದಿ ಉದ್ಘಾಟನೆ!

masthmagaa.com:

ಅರಬ್‌ ಮರುಭೂಮಿಯಲ್ಲಿ ಮೊದಲ ಹಿಂದೂ ಮಂದಿರದ ಉದ್ಘಾಟನೆ ಬೆನ್ನಲ್ಲೇ ಭಾರತ ಯುಎಇಯಲ್ಲಿ ಮೆಗಾ ಮಾರ್ಟ್‌ನ್ನ ಕೂಡ ಸ್ಥಾಪಿಸಿದೆ. ದುಬೈನಲ್ಲಿ ಪ್ರಧಾನಿ ನರೇಂದ್ರ ಮೋದಿ ʻಭಾರತ್‌ ಮಾರ್ಟ್‌ʼನ್ನ ಉದ್ಘಾಟನೆ ಮಾಡಿದ್ದಾರೆ. 2025ಕ್ಕೆ ಕಾರ್ಯಾರಂಭ ಮಾಡಲಿರೊ ಈ ಮಾರ್ಟ್‌ನಲ್ಲಿ ಒಂದೇ ಕಡೇ ಭಾರತದ ಎಲ್ಲಾ ಉತ್ಪನ್ನಗಳು ಸಿಗೋ ಹಾಗೆ ಆಗಲಿದೆ. ಜಬೇಲ್‌ ಅಲಿ ಫ್ರೀ ಜೋನ್‌ (JAFZA)ದಲ್ಲಿ ಈ ಕಾಂಪ್ಲೆಕ್ಸ್‌ ಬರುತ್ತೆ. ಇಲ್ಲಿ DP ವರ್ಲ್ಡ್‌ ಕಂಪನಿ ಕೂಡ ಇದೆ. ಸುಮಾರು 1 ಲಕ್ಷ ಚದರ ಕಿ.ಮೀ ಜಾಗದಲ್ಲಿ ಭಾರತದ ಮಳಿಗೆಗಳಿಗೆಗಳು ಬರಲಿದೆ. ಅಲ್ಲದೇ ವೇರ್‌ಹೌಸ್‌ಗಳು, ಶೋರೂಮ್‌ಗಳು, ರಿಟೇಲ್‌, ಹಾಸ್ಪಿಟಲಿಟಿ ಯೂನಿಟ್‌ಗಳು ಇರಲಿವೆ. ಹೆವಿ ಮಶಿನರಿ ಉಪಕರಣಗಳಿಂದ, ಪೆರಿಶೇಬಲ್‌ ಗೂಡ್ಸ್‌ಗಳವರೆಗೆ ಸಿಗಲಿವೆ. ಈಗಾಗಲೇ ಯುಎಇಯಲ್ಲಿ ಚೀನಾ ಈ ರೀತಿ 2 ಡ್ರ್ಯಾಗನ್‌ ಮಾರ್ಟ್‌ಗಳನ್ನ ಮಾಡ್ಕೊಂಡಿದೆ. ಒಂದೇ ಜಾಗದಲ್ಲಿ 3,500 ಚೀನಿ ಅಂಗಡಿಗಳು, 52 ರೆಸ್ಟಾರೆಂಟ್‌ಗಳು ಇವೆ. ಅದ್ರಂತೆ ಈಗ ಭಾರತ ಕೂಡ ತನ್ನ ಮಾರ್ಟ್‌ ಓಪನ್‌ ಮಾಡ್ತಿದೆ. ಅಂದ್ಹಾಗೆ ಭಾರತ-ಯುಎಇ 2030ರ ಒಳಗೆ ಉಭಯ ದೇಶಗಳ ಪೆಟ್ರೋಲಿಯಂಯೇತರ ಟ್ರೇಡ್‌ನ್ನ, ಡಬಲ್‌ ಮಾಡ್ಬೇಕು, 100 ಬಿಲಿಯನ್‌ ಡಾಲರ್‌ಗೆ ಏರಿಸಬೇಕು ಅಂದ್ಕೊಂಡಿವೆ. ಆ ನಿಟ್ಟಿನಲ್ಲಿ ಈ ಭಾರತ್‌ ಮಾರ್ಟ್‌ ದೊಡ್ಡ ಹೆಜ್ಜೆಯಾಗಿದೆ.

-masthmagaa.com

Contact Us for Advertisement

Leave a Reply