ಭಾರತವನ್ನ ನೋಡಿ ಕಲಿಯಬೇಕು ಹಾಗೂ ಮೋದಿ ಸರಿಯಾದ ಕೆಲಸ ಮಾಡ್ತಿದ್ದಾರೆ: ಪುಟಿನ್‌

masthmagaa.com:

ಮೇಕ್​ ಇನ್​ ಇಂಡಿಯಾ ಯೋಜನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹಾಡಿ ಹೊಗಳಿದ್ದಾರೆ. ರಷ್ಯಾದ ವ್ಲಾಡಿವೋಸ್ಟಾಕ್​ನಲ್ಲಿ ನಡೆದ 8ನೇ ಪೂರ್ವ ಆರ್ಥಿಕ ವೇದಿಕೆಯಲ್ಲಿ ಮಾತಾನಾಡಿರುವ ಪುಟಿನ್‌, ಸ್ವದೇಶಿ ನಿರ್ಮಿತ ವಸ್ತುಗಳ ಬಳಕೆಗೆ ಉತ್ತೇಜನ ನೀಡುವ ಮೋದಿಯವರು ಸರಿಯಾದ ಕೆಲಸ ಮಾಡ್ತಿದ್ದಾರೆ ಅಂತ ಹೇಳಿದ್ದಾರೆ. ಇದೇ ವೇಳೆ ದೇಶೀಯವಾಗಿ ತಯಾರಿಸಿದ ವಾಹನಗಳನ್ನ ಖಂಡಿತವಾಗಿ ಬಳಸಬೇಕು. ಈ ವಿಚಾರದಲ್ಲಿ ಮೋದಿಯವರ ನಾಯಕತ್ವದಲ್ಲಿ ಭಾರತ ಈಗಾಗಲೇ ಈ ಸಾಧನೆ ಮಾಡಿದೆ. ಈ ನಿಟ್ಟಿನಲ್ಲಿ ನಾವು ನಮ್ಮ ಅನೇಕ ಪಾರ್ಟನರ್‌ ದೇಶಗಳಿಂದ, ಅದರಲ್ಲೂ ವಿಶೇಷವಾಗಿ ಭಾರತದಿಂದ ತುಂಬಾ ವಿಚಾರಗಳನ್ನ ಕಲಿಯಬೇಕಿದೆ. ಅವರು ಹೆಚ್ಚಾಗಿ ಭಾರತದಲ್ಲೇ ಉತ್ಪಾದಿಸುವ ಕಾರುಗಳ ಬಳಕೆಯ ಮೇಲೆ ಗಮನಹರಿಸುತ್ತಿದ್ದಾರೆ. ಈ ಯೋಜನೆಯಲ್ಲಿ ಮೋದಿಯವರ ಪಾತ್ರ ಪ್ರಮುಖವಾಗಿದೆ. ಭಾರತದ ಉತ್ಪನ್ನಗಳನ್ನು ಬಳಸಲು ಜನರನ್ನು ಉತ್ತೇಜಿಸುವ ಮೂಲಕ ಸರಿಯಾದ ಕೆಲಸ ಮಾಡುತ್ತಿದ್ದಾರೆ. ನಮ್ಮಲ್ಲಿಯೂ ಅಂತಹ ವಾಹನಗಳು ಲಭ್ಯವಿವೆ ಮತ್ತು ನಾವು ಅದನ್ನು ಬಳಸಿಕೊಳ್ಳಬೇಕು ಅಂತ ಪುಟಿನ್​ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply