UAE 140 ಕೋಟಿ ಭಾರತೀಯರ ಮನಸ್ಸು ಗೆದ್ದಿದೆ: ಪ್ರಧಾನಿ ಮೋದಿ

masthmagaa.com:

ಅಬುಧಾಬಿಯಲ್ಲಿ ಅರಬ್‌ ನಾಡಿನ ಮೊದಲ ಹಿಂದೂ ದೇವಾಲಯ ಉದ್ಘಾಟಿಸಿದ ಬಳಿಕ ಪ್ರಧಾನಿ ಮೋದಿ UAE ಬಗ್ಗೆ ಹರ್ಷ ವ್ಯಕ್ತ ಪಡಿಸಿದ್ದಾರೆ. ʻಮಂದಿರ ಉದ್ಘಾಟನೆಗೆ ಅನುವು ಮಾಡ್ಕೊಟ್ಟು, ಕೋಟ್ಯಾಂತರ ಭಾರತೀಯರ ಆಸೆ ಈಡೇರಿಸಿದ್ದಕ್ಕಾಗಿ UAE ಅಧ್ಯಕ್ಷ ಶೇಖ್‌ ಮೊಹಮ್ಮದ್‌ ಬಿನ್‌ ಜಾಯಿದ್‌ ಅವ್ರಿಗೆ ತುಂಬಾ ಥಾಂಕ್ಸ್‌ʼ ಅಂದಿದ್ದಾರೆ. ಜೊತೆಗೆ ಈ ಸ್ವಾಮಿ ನಾರಾಯಣ ಮಂದಿರ ನಿರ್ಮಿಸುವಲ್ಲಿ ನನ್ನ ʻಸಹೋದರʼ ಮೊಹಮ್ಮದ್‌ ಬಿನ್‌ ಜಾಯಿದ್‌ ಅತಿ ಮಹತ್ವದ ಪಾತ್ರ ನಿಭಾಯಿಸಿದ್ದಾರೆ. ಹೀಗಾಗಿ UAE ಅಲ್ಲಿರೋ ಭಾರತೀಯರ ಮನಸ್ಸಷ್ಟೇ ಅಲ್ಲ, ಭಾರತದ 140 ಕೋಟಿ ಜನರ ಹೃದಯವನ್ನ ಕೂಡ UAE ಗೆದ್ದಿದೆ ಅಂತ ಮೋದಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಜೊತೆಗೆ ʻಈ ಮಂದಿರಕ್ಕೆ ಹೆಚ್ಚಿನ ಭಕ್ತಾಧಿಗಳು ಬರ್ತಾರೆ ಅನ್ನೊ ವಿಶ್ವಾಸ ನನಗಿದೆ. ಮಂದಿರ ಉದ್ಘಾಟನೆ ಬಳಿಕ ಭಾರತದಿಂದ UAEಗೆ ಬರೋರ ಸಂಖ್ಯೆ ಇನ್ನು ಹೆಚ್ಚಾಗಲಿದೆʼ ಅಂತ ಮೋದಿ ಹೇಳಿದ್ದಾರೆ.

UAE ಬಳಿಕ ಪ್ರಧಾನಿ ಮೋದಿ, ಇತ್ತೀಚೆಗಷ್ಟೇ ಭಾರತದ 8 ಮಾಜಿ ನೌಕಾ ಸಿಬ್ಬಂದಿಯನ್ನ ಜೈಲಿನಿಂದ ರಿಲೀಸ್‌ ಮಾಡಿದ್ದ ಕತಾರ್‌ಗೆ ಭೇಟಿ ನೀಡಿದ್ದಾರೆ. ಕತಾರ್‌ನ ರಾಜಧಾನಿ ದೊಹಾ ಏರ್‌ಪೋರ್ಟ್‌ಗೆ ಆಗಮಿಸ್ತಿದ್ದಂತೆ ಪ್ರಧಾನಿ ಮೋದಿ ಅವ್ರನ್ನ ಕತಾರ್‌ನ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಸೊಲ್ತಾನ್‌ ಬಿನ್‌ ಸಾದ್‌ ಅಲ್‌ ಮುರೈಖಿ ಸ್ವಾಗತಿಸಿದ್ರು. ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ವಕ್ತಾರ ರಣಧೀರ್‌ ಜೈಸ್ವಾಲ್‌, ಮೋದಿಗೆ ಕತಾರ್‌ನಲ್ಲಿ ಸಿಕ್ಕ ಭವ್ಯ ಸ್ವಾಗತದ ಬಗ್ಗೆ ಪೋಟೋಗಳನ್ನ ಹಂಚಿಕೊಂಡಿದ್ದಾರೆ.

ಇನ್ನು ಮೋದಿ ಕತಾರ್‌ ಪ್ರಧಾನಿ ಶೇಖ್‌ ಮೊಹಮ್ಮದ್‌ ಬಿನ್‌ ಅಬ್ದುಲ್‌ ರಹಮಾನ್‌ ಬಿನ್‌ ಜಸ್ಸಿಮ್‌ ಅಲ್‌ ಥಾನಿ ಅವ್ರನ್ನ ಮೀಟ್‌ ಮಾಡಿದ್ದಾರೆ. ಈ ವೇಳೆ ಉಭಯ ನಾಯಕರು ಇಂಧನ, ವ್ಯಾಪಾರ, ಹೂಡಿಕೆ, ಹಣಕಾಸು ಸೇರಿದಂತೆ ಮಹತ್ವದ ವಿಷಯಗಳ ಬಗ್ಗೆ ದ್ವಿಪಕ್ಷೀಯ ಸಹಕಾರದ ಕುರಿತು ಮಾತಾಡಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪಿಎಂ ಮೋದಿ ರಿಯಾಕ್ಟ್‌ ಮಾಡಿದ್ದಾರೆ. ಕತಾರ್‌ ಪ್ರಧಾನಿ ಜೊತೆಗಿನ ಮೀಟಿಂಗ್‌ ವೇಳೆ, ಭಾರತ-ಕತಾರ್‌ ನಡುವಿನ ಸ್ನೇಹವನ್ನ ಇನ್ನಷ್ಟು ಹೆಚ್ಚಿಸುವ ಬಗ್ಗೆ ಚರ್ಚಿಸಿದ್ದೇವೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply