ಪ್ರಧಾನಿ ಮೋದಿಗೆ ಲೋಕಮಾನ್ಯ ತಿಲಕ್ ಪ್ರಶಸ್ತಿ ಪ್ರದಾನ: ಸಮಾರಂಭಕ್ಕೆ ಶರದ್ ಪವಾರ್‌ ಮುಖ್ಯ ಅತಿಥಿ

masthmagaa.com:

ಪ್ರಧಾನಿ ನರೇಂದ್ರ ಮೋದಿ ಅವ್ರು ತಮ್ಮ ನಾಯಕತ್ವದ ಮೂಲಕ ದೇಶದ ಜನರಲ್ಲಿ ದೇಶಭಕ್ತಿಯ ಭಾವನೆಯನ್ನ ಜಾಗೃತಗೊಳಿಸಿದ್ದಾರೆ. ಹಾಗಾಗಿ ಅವ್ರಿಗೆ ಆಗಸ್ಟ್‌1 ರಂದು ʻಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿʼಯನ್ನ ಪ್ರದಾನ ಮಾಡಲಾಗುವುದು ಅಂತ ಸಂಘಟಕರು ತಿಳಿಸಿದ್ದಾರೆ. ಕಾರ್ಯಕ್ರಮ ಮಹಾರಾಷ್ಟ್ರದ ಪುಣೆಯಲ್ಲಿ ನಡೆಯಲಿದೆ. ತಿಲಕ್‌ ಸ್ಮಾರಕ ಮಂದಿರ ಟ್ರಸ್ಟ್‌, ಈ ಪ್ರಶಸ್ತಿಯನ್ನ ಪ್ರದಾನ ಮಾಡಲಿದೆ ಅಂತ ಟ್ರಸ್ಟ್ ಅಧ್ಯಕ್ಷ ದೀಪಕ್ ತಿಲಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇನ್ನು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ NCP ಮುಖ್ಯಸ್ಥ ಶರದ್‌ ಪವಾರ್‌ ಅವ್ರನ್ನ ಆಹ್ವಾನಿಸಲಾಗಿದೆ ಅಂತ ಸಂಘಟಕರು ತಿಳಿಸಿದ್ದಾರೆ. ಅಂದ್ಹಾಗೆ ಇತ್ತೀಚಿಗೆ NCP ಯಿಂದ ಅಜಿತ್‌ ಪವಾರ್‌ ಸೇರಿದಂತೆ 40 ಶಾಸಕರು ಹೊರಹೋಗಿದ್ದಾರೆ. ಬಿಜೆಪಿ ಹಾಗೂ ಏಕನಾಥ್‌ ಶಿಂಧೆ ನೇತೃತ್ವದ ಸರ್ಕಾರದೊಂದಿಗೆ ತಮ್ಮ ಪಕ್ಷದ ನಾಯಕರು ಸ್ನೇಹ ಬೆಳೆಸಿರೋದು ಶರದ್‌ ಪವಾರ್‌ ಅವರಿಗೆ ಅಸಮಾಧಾನ ಉಂಟುಮಾಡಿದೆ. ಈ ಹಿನ್ನೆಲೆಯಲ್ಲಿ ಮೋದಿಯವರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಶರದ್‌ ಪವಾರ್‌ ಭಾಗವಹಿಸ್ತಾರಾ ಅಂತ ಕಾದು ನೋಡಬೇಕಿದೆ.

-masthmagaa.com

Contact Us for Advertisement

Leave a Reply