ಮೋದಿ ಸರ್ಕಾರದ ಅಸಮರ್ಥತೆಯಿಂದ ಪುಲ್ವಾಮ ದಾಳಿಯಲ್ಲಿ 40 ಸೈನಿಕರು ಹುತಾತ್ಮರಾದ್ರು: ಸತ್ಯಪಾಲ್‌ ಮಲಿಕ್

masthmagaa.com:

ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್‌ ಮಲ್ಲಿಕ್‌ ಗಂಭೀರ ಆರೋಪ ಮಾಡಿದ್ದಾರೆ. ಮೋದಿ ಸರ್ಕಾರದ ಅಸಮರ್ಥತೆಯಿಂದ 2019ರ ಫೆಬ್ರವರಿಯಲ್ಲಿ ಪುಲ್ವಾಮ ದಾಳಿ ನಡೆದು 40 ಭಾರತೀಯ ಸೈನಿಕರು ಹುತಾತ್ಮರಾದ್ರು. ಆದರೆ ಮೋದಿ ನಮ್ಮನ್ನ ಈ ಕುರಿತು ಮಾತಾಡದಂತೆ ಸುಮ್ಮನಾಗಿಸಿದ್ರು ಅಂತ ಹೇಳಿದ್ದಾರೆ. ಹೆಚ್ಚಿನ ಯೋಧರು ಬೇರೆಡೆ ತೆರಳಬೇಕಾದ ಕಾರಣ ವಿಮಾನಗಳ ವ್ಯವಸ್ಥೆ ಮಾಡುವಂತೆ ಗೃಹ ಸಚಿವಾಲಯಕ್ಕೆ CRPF ಮನವಿ ಮಾಡಿತ್ತು. ಆದರೆ ಗೃಹ ಸಚಿವಾಲಯ ಕೇವಲ 5 ವಿಮಾನಗಳ ವ್ಯವಸ್ಥೆ ಮಾಡಲು ಒಪ್ಪಲಿಲ್ಲ. ಕೊನೆಗೆ ಸೇನಾ ವಾಹನಗಳಲ್ಲೇ ಯೋಧರು ತೆರಳಬೇಕಾಯ್ತು. ಅಂದು ವಾಹನಗಳನ್ನ ಟಾರ್ಗೆಟ್‌ ಮಾಡಿ ದಾಳಿ ನಡೆಸಲಾಯ್ತು ಅಂತ ಹೇಳಿದ್ದಾರೆ. ಇದೇ ವೇಳೆ ಭ್ರಷ್ಟಾಚಾರದ ಕುರಿತು ಮಾತಾಡಿದ ಮಲಿಕ್‌, ಮೋದಿ ಅವ್ರಿಗೆ ಭ್ರಷ್ಟಾಚಾರ ಬಗ್ಗೆ ಕಿಂಚಿತ್ತೂ ಚಿಂತೆಯಿಲ್ಲ. ಅದಕ್ಕೆ ಅವರು ತಲೆಕೊಡಿಸಿಕೊಳ್ಳಲ್ಲ ಅಂತ ಆರೋಪಿಸಿದ್ದಾರೆ. ಅಂದ್ಹಾಗೆ 2019ರ ಅಕ್ಟೋಬರ್‌ನಲ್ಲಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನ ಹಿಂಪಡೆದ ಸಮಯದಲ್ಲಿ ಸತ್ಯಪಾಲ್‌ ಮಲಿಕ್ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್‌ ಆಗಿದ್ರು. ಜಮ್ಮು-ಕಾಶ್ಮೀರವನ್ನ ಕೇಂದ್ರಾಡಳಿತ ಪ್ರದೇಶ ಅಂತ ಘೋಷಿಸಿ ಮಲಿಕ್‌ ಅವ್ರನ್ನ ರಿಮೂವ್‌ ಮಾಡಿದಾಗಿನಿಂದ ಅವರು ಸರ್ಕಾರ ವಿರೋಧಿ ಹೇಳಿಕೆಗಳನ್ನ ಕೊಡ್ತಾನೇ ಇದ್ದು ಈಗ ಕೂಡ ಮೋದಿ ಸರ್ಕಾರದ ವಿರುದ್ದ ಹೊಸ ಆರೋಪ ಮಾಡಿದ್ದಾರೆ. ಇನ್ನು ಸತ್ಯಪಾಲ್‌ ಹೇಳಿಕೆ ಬೆನ್ನಲ್ಲೇ ವಿರೋಧ ಪಕ್ಷಗಳು ಕೇಂದ್ರದ ವಿರುದ್ಧ ತಿರುಗಿಬಿದ್ದಿವೆ. ಇನ್ನೊಂದ್‌ ಕಡೆ ಇದನ್ನೆ ಅಡ್ವಾಂಟೇಜ್‌ ಆಗಿ ತೆಗೆದುಕೊಂಡಿರುವ ಪಾಕಿಸ್ತಾನ, ಭಾರತ ಸರ್ಕಾರ ತನ್ನ ವೈಫಲ್ಯವನ್ನ ಮುಚ್ಚಿ ಹಾಕಲು ಪಾಕಿಸ್ತಾನದ ಮೇಲೆ ಸುಳ್ಳು ಆರೋಪ ಹೊರಿಸಿದೆ ಅಂತ ಹೇಳಿದೆ. ಪಿಒಕೆಯ ಮಾಜಿ ಗವರ್ನರ್‌ ಅವ್ರು ಪುಲ್ವಾಮ ದಾಳಿಯ ಕುರಿತು ಶಾಕಿಂಗ್‌ ವಿಚಾರವನ್ನ ಬಹಿರಂಗಗೊಳಿಸಿದ್ದಾರೆ. ಜೊತೆಗೆ ಘಟನೆಗೆ ಪಾಕಿಸ್ತಾನವನ್ನ ಹೊಣೆಯಾಗಿಸಿ ಚುನಾವಣೆಯಲ್ಲಿ ಲಾಭಗಳಿಸಲು ಬಿಜೆಪಿ ಪ್ರಯತ್ನಪಟ್ಟಿದೆ ಅನ್ನೋದು ಕ್ಲಿಯರ್‌ ಆಗಿದೆ ಅಂತ ಪಾಕ್‌ ಮಾಧ್ಯಮವೊಂದು ವರದಿ ಮಾಡಿದೆ.

-masthmagaa.com

Contact Us for Advertisement

Leave a Reply