ಕರ್ನಾಟಕದಲ್ಲಿ ದೇಶದ ಅತಿದೊಡ್ಡ ಹೆಲಕಾಪ್ಟರ್‌ ಉತ್ಪಾದನಾ ಘಟಕ! ಮೋದಿಯಿಂದ ಉದ್ಘಾಟನೆ!

masthmagaa.com:

ಪ್ರಧಾನಿ ಮೋದಿ ಇದೇ ಫೆಬ್ರುವರಿ 6ನೇ ತಾರೀಖು ರಾಜ್ಯಕ್ಕೆ ಬರಲಿದ್ದಾರೆ. ಈ ವೇಳೆ ತುಮಕೂರು ಜಿಲ್ಲೆಯಲ್ಲಿ ಹೆಲಿಕಾಪ್ಟರ್‌ ಉತ್ಪಾದನಾ ಘಟಕವನ್ನ ಉದ್ಘಾಟನೆ ಮಾಡಲಿದ್ದಾರೆ. ಇದು ದೇಶದಲ್ಲಿ ಅತಿದೊಡ್ಡ ಹೆಲಿಕಾಪ್ಟರ್‌ ಉತ್ಪಾದನಾ ಘಟಕ ಅಂತ ಹೇಳಲಾಗಿದ್ದು 615 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಇದ್ರಲ್ಲಿ ಆರಂಭದಲ್ಲಿ ವರ್ಷಕ್ಕೆ ಸುಮಾರು 30 ಹೆಲಿಕಾಪ್ಟರ್‌ಗಳನ್ನು ಉತ್ಪಾದಿಸುವ ಗುರಿ ಹೊಂದಲಾಗಿದೆ. ಬಳಿಕ ಹಂತ ಹಂತವಾಗಿ ವರ್ಷಕ್ಕೆ 60 ಮತ್ತು ನಂತರ 90ಕ್ಕೆ ಹೆಚ್ಚಿಸುವ ಯೋಜನೆ ಹಾಕಿಕೊಳ್ಳಲಾಗಿದೆ. 3 ರಿಂದ 15 ಟನ್‍ಗಳ ವ್ಯಾಪ್ತಿಯಲ್ಲಿ 1,000 ಕ್ಕೂ ಹೆಚ್ಚು ಹೆಲಿಕಾಪ್ಟರ್‌ಗಳನ್ನು ಉತ್ಪಾದಿಸಲು ಹಿಂದೂಸ್ಥಾನ್‌ ಏರೋನಾಟಿಕ್ ಲಿಮಿಟೆಡ್‌ ಚಿಂತಿಸಿದೆ, ಇದರಿಂದ ಮುಂದಿನ 20 ವರ್ಷಗಳ ಅವಧಿಯಲ್ಲಿ ಒಟ್ಟು 4 ಲಕ್ಷ ಕೋಟಿ ರೂಪಾಯಿ ವ್ಯವಹಾರವಾಗುವ ನಿರೀಕ್ಷೆ ಹೊಂದಲಾಗಿದೆ.

-masthmagaa.com

Contact Us for Advertisement

Leave a Reply