ಬ್ರಿಕ್ಸ್‌ ಬಳಿಕ ನಾಳೆ G-7 ಕಾಣಿಸಿಕೊಳ್ಳಲಿರೋ ಮೋದಿ..! ಜರ್ಮನಿಗೆ ಪ್ರಯಾಣ

masthmagaa.com:

ಬ್ರಿಕ್ಸ್‌ ಸಭೆ ಬಳಿಕ ಪ್ರಧಾನಿ ಮೋದಿ ಯುರೋಪ್‌ಗೆ ಭೇಟಿ ನೀಡ್ತಾಯಿದ್ದು ನಾಳೆಯಿಂದ G-7 ದೇಶಗಳು ನಡೆಸ್ತಿರೋ ಶೃಂಗಸಭೆಯಲ್ಲಿ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಜೂನ್ 26 ರಿಂದ 28ರ ತನಕ ಜರ್ಮನಿಯಲ್ಲಿ ಈ ಸಭೆ ನಡೆಯಲಿದೆ. ಸಭೆಗೂ ಮುನ್ನ ಹೇಳಿಕೆ ನೀಡಿರೋ ಮೋದಿ ಜಿ 7 ಸಭೆಯಲ್ಲಿ ಜಾಗತಿಕ ಸಮಸ್ಯೆಗಳ ಕುರಿತು ನಮ್ಮ ಆಸಕ್ತಿಯನ್ನ ವಿನಿಮಯ ಮಾಡಿಕೊಳ್ಳಲಿದ್ದೇವೆ. ಜೊತೆಗೆ ನೈಸರ್ಗಿಕ ಶಕ್ತಿ, ಎನರ್ಜಿ, ಕ್ಲೇಮೇಟ್‌, ಆಹಾರ ಭದ್ರತೆ, ಆರೋಗ್ಯ, ಭಯೋತ್ಪಾದನೆ ಸೇರಿದಂತೆ ಚರ್ಚೆ ಮಾಡಲಿದ್ದೇವೆ ಅಂತ ಹೇಳಿದ್ದಾರೆ. ಇದೇ ವೇಳೆ ಇನ್ನಿತರ ದೇಶಗಳ ಜೊತೆ ಕೂಡ ಸಭೆ ನಡೆಸುವ ಸಾಧ್ಯತೆ ಇದೆ. ಇನ್ನು ಇದಾದ ಬಳಿಕ ಮೋದಿ UAE ಗೂ ಭೇಟಿ ನೀಡಲಿದ್ದಾರೆ ಅಂತ ಮೂಲಗಳು ತಿಳಿಸಿವೆ.

-masthmagaa.com

Contact Us for Advertisement

Leave a Reply